ಚಿಕ್ಕಮಗಳೂರು: ಯುವಕರಿಗೆ ಉದ್ಯೋಗ, ಮಧ್ಯಮ ವರ್ಗಕ್ಕೆ ಸಮಾಧಾನ ಮತ್ತು ಪ್ರತಿಯೊಬ್ಬ ಭಾರತೀಯನಿಗೆ ಅಭಿವೃದ್ಧಿಯ ಭರವಸೆ ನೀಡಿದ “ಸರ್ವಸ್ಪರ್ಶಿ ಬಜೆಟ್” ಇದು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಸಂತೋಷ್ ಕೋಟ್ಯಾನ್ ತಿಳಿಸಿದ್ದಾರೆ.
ಹೌದು .. 2026-27ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಮಾತನಾಡಿದ ಅವರು, ಯುವ ಶಕ್ತಿಯನ್ನು ದೇಶದ ಪ್ರಗತಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ವಿಕಸಿತ ಭಾರತದ ಸಂಕಲ್ಪಕ್ಕೆ ಇಂದಿನ ಬಜೆಟ್ ದೊಡ್ಡ ಶಕ್ತಿ ನೀಡಿದೆ ಎಂದರು.

ಹಾಗೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ಸರ್ಕಾರ ಮಂಡಿಸಿರುವ 2026-27ನೇ ಸಾಲಿನ ಬಜೆಟ್, ಅಮೃತ ಕಾಲದ “ವಿಕಸಿತ ಭಾರತ”ದ ಕನಸನ್ನು ಸಾಕಾರಗೊಳಿಸುವ ‘ಯುವಶಕ್ತಿ ಚಾಲಿತ’ ಆಯವ್ಯಯವಾಗಿದೆ. ಈ ಬಜೆಟ್ ದೇಶದ ಯುವಜನತೆಯ ಉದ್ಯೋಗ, ಕೌಶಲ್ಯ ಮತ್ತು ಉದ್ಯಮಶೀಲತೆಗೆ ಹೊಸ ಆಯಾಮವನ್ನು ನೀಡಿದೆ.
ಶಿಕ್ಷಣದಿಂದ ಉದ್ಯೋಗದತ್ತ ಯುವಜನರ ಆಕಾಂಕ್ಷೆಗಳನ್ನು ಈಡೇರಿಸಲು ‘ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮಶೀಲತೆ’ ಎಂಬ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದು ಐತಿಹಾಸಿಕ ಹೆಜ್ಜೆ. ಇದು ಶಿಕ್ಷಣ ಮತ್ತು ಮಾರುಕಟ್ಟೆಯ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ಹಾಗೆ ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರಿಗಾಗಿ ಸುಸಜ್ಜಿತ ಹಾಸ್ಟೆಲ್‌ಗಳನ್ನು ನಿರ್ಮಿಸುವ ಘೋಷಣೆ ಮಾಡಲಾಗಿದ್ದು, ಇದು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ದೊಡ್ಡ ಬಲ ನೀಡಲಿದೆ ಎಂದರು
AI ಮತ್ತು ತಂತ್ರಜ್ಞಾನಕ್ಕೆ ಒತ್ತು: ಶಾಲೆಗಳಲ್ಲೇ AI (ಕೃತಕ ಬುದ್ಧಿಮತ್ತೆ) ಕಲಿಕೆಗೆ ಒತ್ತು ನೀಡುತ್ತಿರುವುದು ಮತ್ತು ‘ನ್ಯಾಷನಲ್ ರಿಸರ್ಚ್ ಫಂಡ್’ ಸ್ಥಾಪನೆಯು ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನತೆಗೆ ಅಪಾರ ಅವಕಾಶಗಳನ್ನು ಸೃಷ್ಟಿಸಲಿದೆ. ಕರ್ನಾಟಕದ ಹೆಮ್ಮೆಯ ಬೆಳೆಗಳಾದ ತೆಂಗು, ಶ್ರೀಗಂಧ ಮತ್ತು ಗೋಡಂಬಿ ಕೃಷಿಗೆ ನೀಡಲಾಗಿರುವ ವಿಶೇಷ ಪ್ರೋತ್ಸಾಹವು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವ ಉದ್ಯಮಿಗಳಿಗೆ ವರದಾನವಾಗಲಿದೆ. ಮುಂದಿನ 5 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ‘ಅಲೈಡ್ ಹೆಲ್ತ್ ಪ್ರೊಫೆಷನಲ್ಸ್’ಗಳನ್ನು ಸಿದ್ಧಪಡಿಸುವ ಯೋಜನೆಯು ವೈದ್ಯಕೀಯ ಕ್ಷೇತ್ರದ ಯುವಜನತೆಗೆ ದೊಡ್ಡ ಉದ್ಯೋಗಾವಕಾಶ ತರಲಿದೆ ಎಂದು ಹೇಳಿದರು.
ಈ ಬಜೆಟ್ ಕೇವಲ ಅಂಕಿ-ಅಂಶಗಳ ಸಂಕಲನವಲ್ಲ, ಇದು ಯುವ ಭಾರತದ ಭವಿಷ್ಯದ ನೀಲನಕ್ಷೆ. ವಿರೋಧ ಪಕ್ಷಗಳು ಕೇವಲ ರಾಜಕೀಯಕ್ಕಾಗಿ ಟೀಕೆ ಮಾಡುವುದನ್ನು ಬಿಟ್ಟು, ದೇಶದ ಯುವಶಕ್ತಿಯನ್ನು ಸಬಲೀಕರಣಗೊಳಿಸುವ ಈ ದೂರದೃಷ್ಟಿಯ ಬಜೆಟ್ ಅನ್ನು ಸ್ವಾಗತಿಸಬೇಕು. ಅದೇ ರೀತಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಈ ಜನಪರ ಮತ್ತು ಯುವಪರ ಬಜೆಟ್ ಅನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಚಿಕ್ಕಮಗಳೂರು: ಯುವ ಭಾರತದ ಭವಿಷ್ಯದ ನೀಲನಕ್ಷೆ, ಸರ್ವಸ್ಪರ್ಶಿ ಬಜೆಟ್ : ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ತಿಳಿಸಿದ್ದಾರೆ.
