Thursday, February 26, 2026
Homeಕ್ರೈಮ್ಚಿಕ್ಕಮಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ: ಅಸ್ಸಾಂ ಮೂಲದ ಅಪರಾಧಿಗೆ 6 ವರ್ಷ ಶಿಕ್ಷೆ!

ಚಿಕ್ಕಮಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ: ಅಸ್ಸಾಂ ಮೂಲದ ಅಪರಾಧಿಗೆ 6 ವರ್ಷ ಶಿಕ್ಷೆ!

ಚಿಕ್ಕಮಗಳೂರು: ಕೇವಲ 3 ಸಾವಿರ ರೂ. ಸಾಲ ಮರಳಿಸದ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬರನ್ನು ಕತ್ತಿಯಿಂದ ಕಡಿದು ತೀವ್ರವಾಗಿ ಗಾಯಗೊಳಿಸಿದ್ದ ಆಪಾದಿತನಿಗೆ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 6 ವರ್ಷಗಳ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಹೋಬಳಿ ಅಡ್ಡಮಕ್ಕಿಯ ಕಾಫಿ ತೋಟದ ಕೂಲಿ ಕಾರ್ಮಿಕ ಅಸ್ಸಾಂ ಮೂಲದ ಕೋರ್ನೋ ಬಹದ್ದೂರು ರೈ ಎಂಬಾತನೇ ಶಿಕ್ಷೆಗೆ ಒಳಗಾದವ. ಈತ ರಶೀದುಲ್ಲ ಎಂಬಾತದೊಂದಿಗೆ ವಾಸವಾಗಿದ್ದು, ರಶೀದಿಲ್ಲ ಈತನಿಗೆ ರೂ.ಗಳ ಸಾಲ 3 ಸಾವಿರ ಬಾಕಿ ಉಳಿಸಿಕೊಂಡಿದೆ. 2023ರ ಜೂನ್20 ರಂದು ಸಂಜೆ ಈ ವಿಚಾರವನ್ನು ಪ್ರಶ್ನಿಸಿದ ಬಹದ್ದೂರು ರೈ ಕತ್ತಿಯಿಂದ ರಶೀದಿಲನ ತಲೆಯ ಭಾಗಕ್ಕೆ ಕಡಿಯಲು ಯತ್ನಿಸಿದ್ದು, ಇದನ್ನು ತಡೆಯಲು ಯತ್ನಿಸಿದಾಗ ರಶೀದುಲ್ಲನ ಕೈ ತುಂಡಾಗಿತ್ತು.

ಈ ಬಗ್ಗೆ ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಆರೋಪಿಯ ವಿರುದ್ಧ ಐಪಿಸಿ ಕಲಾಂ 506, 307, 326, 324ರ ಅನ್ವಯ ಪ್ರಕರಣ ದಾಖಲಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಸಿ.ಭಾನುಮತಿ ಅವರು ಸಾಕ್ಷಿದಾರರ ವಿಚಾರಣೆ ನಡೆಸಿದ ಸಂದರ್ಭ ಆರೋಪ ಹೊರಿಸಿ ಆಪಾದಿತನಿಗೆ ಐ 307ರ ಅನ್ವಯ 6 ವರ್ಷಗಳ ಕಠಿಣ ಸಜೆ, 10 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ ಅನುಭವಿಸಲು ತೀರ್ಪಿನಲ್ಲಿದೆ.

ಕಲಂ 326 ಐಪಿಸಿ ಅಡಿಯ ಅಪರಾಧಕ್ಕಾಗಿ ಆತನಿಗೆ 5 ವರ್ಷ ಕಠಿಣ ಸಜೆ, 5 ಸಾವಿರ ರೂ. ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಸಾದಾ ಸಜೆ, ಕಲಂ 324 ರಡಿ ಅಪರಾಧಕ್ಕಾಗಿ 2 ವರ್ಷ ಕಠಿಣ ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದ್ದು, ತಿಂಗಳಿಗೆ ದಂಡ ವಿಧಿಸಿದ್ದು, ಒಂದು ಸಾದಾ ಸಜೆ, ಕಲಂ 506ರ ಐಪಿಸಿ ಅಡಿಯ ಅಪರಾಧಕ್ಕಾಗಿ 1 ವರ್ಷ ಕಠಿಣ ಸಜೆ ಮತ್ತು ೨ ಸಾವಿರ ರೂ. ದಂಡ ವಿಧಿಸಿದ್ದು, ದಂಡ ತೆರೆಯಲು ತಪ್ಪಿದಲ್ಲಿ 15 ದಿನಗಳ ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ. ಆಪಾದಿತ ಈ ಎಲ್ಲ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಲಿದ್ದಾನೆ.

ಪ್ರಕರಣದಲ್ಲಿ ತನಿಖಾಧಿಕಾರಿಗಳಾದ ಆಲ್ದೂರು ಠಾಣೆಯ ಪಿಎಸ್‌ಐಗಳಾಗಿದ್ದ ಸಜಿತ್‌ಕುಮಾರ್ ಹಾಗೂ ಅಕ್ಷಿತಾ ತನಿಖೆ ಕೈಗೊಂಡ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆಲ್ದೂರು ಠಾಣೆಯ ಎಸ್‌ಐ ಬಸವರಾಜು ಅವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ವಿಚಾರಣೆಗೆ ಸಮರ್ಪಕವಾಗಿ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್.ಲೋಹಿತಾಶ್ವ ಆಚಾರ್ ವಾದ ಮಂಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!