Monday, July 27, 2026
Homeಜಿಲ್ಲಾಸುದ್ದಿಮೂಡಿಗೆರೆ: ಅಂಗನವಾಡಿಗಳಿಗೆ ಸಮರ್ಪಕ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ: ಶಿಕ್ಷಕಿಯರ ಕ್ರಮಕ್ಕೆ ಒತ್ತಾಯ

ಮೂಡಿಗೆರೆ: ಅಂಗನವಾಡಿಗಳಿಗೆ ಸಮರ್ಪಕ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ: ಶಿಕ್ಷಕಿಯರ ಕ್ರಮಕ್ಕೆ ಒತ್ತಾಯ

Telegram Group
Join Now

ಮೂಡಿಗೆರೆ: ತಾಲೂಕು ಗೋಣಿಬೀಡು ಹೋಬಳಿ ಕುಂಬರಡಿ ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿ ಪಲಾನುಭವಿಗಳಿಗೆ ಸಮರ್ಪಕ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಕುರಿತು ಮಾತಾನಾಡಿದ ಸ್ಥಳೀಯ ನವೀನ್ ಸರ್ಕಾರದಿಂದ ಬರುವ ಪೌಷ್ಟಿಕ ಆಹಾರ ವಿತರಿಸುತ್ತಿಲ್ಲ. ಕೇಂದ್ರಕ್ಕೆ ಮಕ್ಕಳನ್ನು ಕರೆತರುತ್ತಿಲ್ಲ. ಸರಿಯಾಗಿ ಶಿಕ್ಷಣ ಕಲಿಸದೇ ಇರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಧರ್ಮಪತ್ನಿ ಸಂಧ್ಯಾ ಅವರಿಗೆ ಆಧಾರ್ ಲಿಂಕ್ ಮಾಡಿಕೊಡಲು ಹಿಂದೇಟು ಹಾಕುತ್ತಿರುವುದಾಗಿ ಆರೋಪಿಸಿದರು

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು

ಈ ಅಂಗನವಾಡಿ ಯಲ್ಲಿ ಮಕ್ಕಳು ಬೆರಣಿಕೆಯಷ್ಟು ಮಾತ್ರ ಹಾಜರಿರುತ್ತಾರೆ. ಅಂಗನವಾಡಿ ಕೇಂದ್ರದಲ್ಲಿ ಏನು? ಕೊಟ್ಟಿದ್ದಾರೆ ಎಂದು ಕೇಳಿದರೆ, ಉಪ್ಪಿಟ್ಟು, ಉಂಡೆ, ಅನ್ನಸಾರು ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲ. ಸರ್ಕಾರದಿಂದ ಬರುವ ಮೊಟ್ಟೆ, ಹಾಲು ಇತರೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡದೆ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಪೌಷ್ಟಿಕ ಆಹಾರದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ.ಎಂದು ಆರೋಪ ಮಾಡಿದ್ದಾರೆ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕುಂಬರಡಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ತಪ್ಪಿಸ್ಥ ಅಂಗನವಾಡಿ ಸಹಾಯಕಿ ಹಾಗೂ ಶಿಕ್ಷಕಿಯರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments