ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಾನವ ವನ್ಯಜೀವಿ ಸಂಘರ್ಷ ಮುಂದುವರಿದಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಶ್ರೀನಿವಾಸ ಗ್ರಾಮದ ಸುಗುಡವಾನಿ ಕೊಂಕಳ ಮನೆ ಬಳಿ ನಡೆದಿದೆ

ಹೌದು .. ರವಿಕುಮಾರ್ ಎಂಬವರಿಗೆ ಗಂಭೀರ ಗಾಯವಾಗಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಪೊದೆಯಿಂದ ಹೊರ ಬಂದ ಬೃಹತ್ ಗಾತ್ರದ ಕಾಡುಕೋಣ ಎದೆಯ ಮೇಲೆ ಎರಗಿ ತನ್ನ ಕೊಂಬಿನಿಂದ ತಿವಿದು ಘಾಸಿಗೊಳಿಸಿದೆ.

ಹೀಗೆ ರಕ್ತಸ್ತ್ರಾವದಿಂದ ಬಳಲುತ್ತಿದ್ದವರನ್ನು ಸ್ಥಳೀಯರ ಸಹಾಯದಿಂದ ಕೂಡಲೇ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಕಾಡುಕೋಣಗಳು ಉಪಟಳ ಹೆಚ್ಚಾಗಿದ್ದು ಪದೇ ಪದೇ ಇಂಥ ದಾಳಿ ನಡೆಯುತ್ತಿವೆ ಇದರಿಂದಾಗಿ ಸ್ಥಳೀಯರು ರೈತರು ತೋಟದ ಕಾರ್ಮಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ
