Wednesday, October 14, 2026
Homeಜಿಲ್ಲಾಸುದ್ದಿಆಧಾರ್ – ರೇಷನ್ ಕಾರ್ಡ್ ನೆಪದಲ್ಲಿ ಗೊಂದಲ, ಸರ್ಕಾರದ ನಡೆಗೆ ಆಕ್ರೋಶ: 'ರಾಜಕೀಯ ಬುಡ ಕತ್ತರಿಸುವ...

ಆಧಾರ್ – ರೇಷನ್ ಕಾರ್ಡ್ ನೆಪದಲ್ಲಿ ಗೊಂದಲ, ಸರ್ಕಾರದ ನಡೆಗೆ ಆಕ್ರೋಶ: ‘ರಾಜಕೀಯ ಬುಡ ಕತ್ತರಿಸುವ ಎಚ್ಚರಿಕೆ ನೀಡಿದ ಆಶಾ ಮೂಡಿಗೆರೆ

Telegram Group
Join Now

ಮೂಡಿಗೆರೆ: ಆಧಾರ್ – ರೇಷನ್ ಕಾರ್ಡ್ ನೆಪದಲ್ಲಿ ಗೊಂದಲ ಸೃಷ್ಟಿಸುತ್ತಿರುವ , ಸರ್ಕಾರದ ನಡೆಗೆ ತೀವ್ರ ಆಕ್ರೋಶ ಹೆಚ್ಚಾಗಿದ್ದು’ರಾಜಕೀಯ ಬುಡ ಕತ್ತರಿಸುವ ಎಚ್ಚರಿಕೆಯನ್ನು ವುಮೆನ್ ಇಂಡಿಯಾ ಮೂಮೆಂಟ್‌ನ ರಾಜ್ಯ ಕಾರ್ಯದರ್ಶಿ ಆಶಾ
ಮೂಡಿಗೆರೆ ನೀಡಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದೆಡೆ ಅಂಚೆ ಕಚೇರಿಗಳಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಆಧಾರ್ ಕಾರ್ಡ್ ಅಪ್‌ಡೇಟ್ ಆಗುತ್ತಿಲ್ಲ, ಇನ್ನೊಂದೆಡೆ ಆಧಾರ್ ಕಾರ್ಡ್ ಅಪ್‌ಡೇಟ್ ಆಗದೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸುತ್ತಿದ್ದಾರೆ. ಸರ್ಕಾರದ ಈ ಗೊಂದಲಮಯ ನೀತಿಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಎಂದು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ನಿಜವಾಗಿಯೂ ತಾಕತ್ತಿದ್ದರೆ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಸಬೂಬು ಹೇಳದೆ ನೇರವಾಗಿ ಜನರಿಗೆ ತಲುಪಿಸಿ ಮುನ್ನಡೆಸಲಿ. , ಪದೇ ಪದೇ ಅಪ್‌ಡೇಟ್, ಇ-ಕೆವೈಸಿ, ಡೆಡ್‌ಲೈನ್ ಎಂಬ ನೆಪಗಳನ್ನು ಹೇಳಿ ಜನಸಾಮಾನ್ಯರನ್ನು ರೋಸಿಹೋಗುವಂತೆ ಮಾಡಿದರೆ, ಮುಂಬರುವ ದಿನಗಳಲ್ಲಿ ಸಾರ್ವಜನಿಕರೇ ಅಪ್‌ಡೇಟ್ ಆಗಿ ನಿಮ್ಮ ರಾಜಕೀಯ ಬುಡವನ್ನೇ ಅಡಿಮೇಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು .

ಸರ್ಕಾರದ ವಿಫಲ ನೀತಿ ಮತ್ತು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆಯನ್ನು ಬಗೆಹರಿಸಲು ಸಂಬಂಧ ಪಟ್ಟ ಇಲಾಖೆಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಅಗ್ರಹಿಸಿದರು

ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು. ಕೇವಲ ಅಂಚೆ ಕಚೇರಿಯನ್ನು ಮಾತ್ರ ನೆಚ್ಚಿಕೊಳ್ಳದೆ, ಪ್ರತಿಯೊಂದು ಗ್ರಾಮ ಪಂಚಾಯತಿ, ‘ಗ್ರಾಮ ಒನ್’ ಮತ್ತು ‘ಕರ್ನಾಟಕ ಒನ್’ ಕೇಂದ್ರಗಳಲ್ಲಿ ಆಧಾರ್ ಅಪ್‌ಡೇಟ್ ಹಾಗೂ ಇ-ಕೆವೈಸಿಗೆ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಬೇಕು.

ಅಪ್‌ಡೇಟ್ ನೆಪದಲ್ಲಿ ಬಡವರ ರೇಷನ್ ಹಾಗೂ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಕಡಿತಗೊಳಿಸುವ ಹುನ್ನಾರವನ್ನು ಕೈಬಿಡಬೇಕು.ಮೂಡಿಗೆರೆ ತಾಲೂಕಿನ ಪ್ರತಿಯೊಂದು ಹೋಬಳಿ ಮತ್ತು ಪಂಚಾಯತಿ ಮಟ್ಟದಲ್ಲಿ ಆಧಾರ್ ತಿದ್ದುಪಡಿ ಹಾಗೂ ಇ-ಕೆವೈಸಿಗಾಗಿ ತಾತ್ಕಾಲಿಕ ಕೌಂಟರ್‌ಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ ಜನಸಾಮಾನ್ಯರು ಬೀದಿಗಿಳಿದು ತೀವ್ರ ಸ್ವರೂಪದ ಹೋರಾಟ ನಡೆಸುವ ಮುನ್ನ ಅಧಿಕಾರಿಗಳು ಎಚ್ಚೇತ್ತು ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!