Wednesday, February 25, 2026
Homeಕ್ರೈಮ್ಲಾಠಿ ಚಾರ್ಜ್‌ʼನ ಎಂಜಾಯ್ ಮಾಡಿದ ಡಿಸಿ,ಎಸ್ಪಿ: ಪಬ್ಲಿಕ್ ಇಂಪ್ಯಾಕ್ಟ್ ಕ್ಯಾಮೆರಾದಲ್ಲಿ ಸೆರೆಯಾದ ಪೊಲೀಸರ ದರ್ಪ!

ಲಾಠಿ ಚಾರ್ಜ್‌ʼನ ಎಂಜಾಯ್ ಮಾಡಿದ ಡಿಸಿ,ಎಸ್ಪಿ: ಪಬ್ಲಿಕ್ ಇಂಪ್ಯಾಕ್ಟ್ ಕ್ಯಾಮೆರಾದಲ್ಲಿ ಸೆರೆಯಾದ ಪೊಲೀಸರ ದರ್ಪ!


ರೈತರಿಗೆ ಲಾಠಿ ಏಟು ಬೀಳ್ತಿದ್ರೆ ಅಧಿಕಾರಿಗಳಿಗೆ ಖುಷಿಯೋ ಖುಷಿ ಪಬ್ಲಿಕ್ ಇಂಪ್ಯಾಕ್ಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಡಿಸಿ, ಎಸ್ಪಿ ಅಟ್ಟಹಾಸ.! ಲಾಠಿ ಚಾರ್ಜ್ ಆದೇಶ ಮಾಡಿ ನೋಡುತ್ತಾ ನಿಂತ ಅಧಿಕಾರಿಗಳು.!
ನಾವೇನು ಮಾಡಿಲ್ಲ, ಬಿಟ್ಬಿಡಿ ಸರ್, ನಮಗೆ ಹೊಡೆಯಬೇಡಿ..! ರಸ್ತೆಯಲ್ಲಿ ಮಾತ್ರವಲ್ಲ ಅಂಗಡಿ, ಫುಟ್ ಪಾತ್ ಎಲ್ಲೆಡೆಯೂ ಲಾಠಿ ಸದ್ದುಬಲವಂತವಾಗಿ ಅಂಗಡಿ ಬಾಗಿಲು ಮುಚ್ಚಿಸಿ ದರ್ಪ ತೋರಿದ ಪೊಲೀಸ್ರು

ರಕ್ತ ಸುರಿಸಿಕೊಂಡು ಅನ್ನದಾತರ, ಜನಸಾಮಾನ್ಯರ ನರಳಾಟ ಮಕ್ಕಳು, ಮಹಿಳೆಯರು ಎನ್ನದೇ ಲಾಠಿ ಚಾರ್ಜ್ ಮಾಡಿದ ಖಾಕಿ ಎಲ್ಲಾವನ್ನೂ ನೋಡುತ್ತಾ ಗಹಗಹಿಸಿ ನಗುತ್ತಿದ್ದ ಎಸ್ಪಿ, ಡಿಸಿ.! ಪ್ರತಿಭಟನೆಯನ್ನ ಹತ್ತಿಕ್ಕಿ ಬಿಟ್ಟು ಅನ್ನೋ ಸಂಭ್ರಮವೋ ಸಂಭ್ರಮ.! ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದನ್ನ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ನಡೆದಿದ್ದ ಪ್ರತಿಭಟನೆಅನ್ನದಾತರನ್ನ ಬಗ್ಗುಬಡಿದು ಅಂತಾ ಖುಷಿಪಟ್ಟ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಡಳಿತದ ‘ಮಾನಸಿಕತೆ’ ಬಟಾಬಯಲು

ವಾರೆವ್ಹಾ.. ನಿಮ್ಮಂತ ಅಧಿಕಾರಿಗಳನ್ನ ಪಡೆದ ನಾವೇ ಧನ್ಯರು.! ಶಾಂತಿ ಸುವ್ಯವಸ್ಥೆಯನ್ನ ಕಾಪಾಡಿಕೊಳ್ಳಬೇಕಾದ, ಅಧಿಕಾರಿಗಳೇ ಶಾಂತಿ ಭಂಗ ತರುತ್ತಾರೆ ಅಂದ್ರೆ ನೀವು ನಂಬ್ಲೇಬೇಕು. ಚಿಕ್ಕಮಗಳೂರಿನಲ್ಲಿ ಮೊನ್ನೆ ನಡೆದ ಘಟನೆ ಇದನ್ನ ಸಾಕ್ಷಿಕರಿಸುತ್ತಿದೆ. ನೋ, ಡೌಟ್,, ಮೊನ್ನೆಯ ಪ್ರತಿಭಟನೆಯನ್ನ ಹಿಮ್ಮೆಟ್ಟಿಸಬೇಕು ಅನ್ನೋದೇ ಜಿಲ್ಲಾಡಳಿತ ಪ್ಲಾನ್ ಆಗಿತ್ತಾ..? ರೈತರ ಸಮಸ್ಯೆಗೆ ಸ್ಪಂದಿಸಬಾರದು ಅನ್ನೋದೇ ನಿಮ್ಮ ಟಾರ್ಗೆಟ್ ಆಗಿತ್ತಾ..? ಹೌದು, ಅಂತಾ ಸಾಬೀತು ಮಾಡ್ತಿದೆ, ಮೊನ್ನೆ ನೀವು ನಡೆದುಕೊಂಡ ರೀತಿ. ಒಂದು ವಾರದೊಳಗೆ, ಒಂದೇ ಜಾಗದಲ್ಲಿ ಎರಡೆರಡು ಅಮಾಯಕರ ಹೆಣ ಬೀಳುತ್ತೆ ಅಂದ್ರೆ, ಖಂಡಿತವಾಗಿ ಜನರ ಆಕ್ರೋಶದ ಕಟ್ಟೆ ಒಡೆಯುತ್ತೆ ಕಂಡ್ರಿ.. ಒಂದ್ಕಡೆ ಪ್ರಾಣ ಹಾನಿ, ಮತ್ತೊಂದೆ ನಿರಂತರ ಬೆಳೆಹಾನಿ.. ಇದಕ್ಕೆಲ್ಲಾ ಲಂಗು ಲಾಗಮು ಹಾಕಬೇಕಾಗಿದ್ದ ಜಿಲ್ಲಾಡಳಿತ, ಅರಣ್ಯ ಇಲಾಖೆ, ಅರಣ್ಯ ಸಚಿವರು ಎಲ್ಲರೂ ಗಾಢ ನಿದ್ರೆಯಲ್ಲಿ ಮುಳುಗಿದ್ರೆ, ಜನರು ಪ್ರತಿಭಟಿಸದೇ ಇರುತ್ತಾರಾ..? ಆಕ್ರೋಶವನ್ನ ವ್ಯಕ್ತಪಡಿಸದೇ ಇರ್ತಾರಾ..?

ನಮ್ಮ ಪ್ರಜಾಪ್ರಭುತ್ವ ಕೊಟ್ಟಿರೋ ಹಕ್ಕನ್ನೇ, ಪ್ರಜೆಗಳು ಚಲಾಯಿಸಿದ್ದು..! ಬೆಳಗ್ಗೆ ೮ ಗಂಟೆಗೆ ಕಾಡಾನೆ ದಾಳಿಗೆ ಬಲಿಯಾಗಿದೆ ಅಂತಾ ಗೊತ್ತಾದ್ರೂ, ರಾಜ್ಯ ಹೆದ್ದಾರಿಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸ್ತಿದ್ದಾರೆ ಅಂತಾ ತಿಳಿದ್ರೂ ಮೊಂಡುತನ ಪ್ರದರ್ಶನ ಮಾಡಿದ ಜಿಲ್ಲಾಧಿಕಾರಿ, ಎಸ್ಪಿ ಸ್ಥಳಕ್ಕೆ ಹೋಗೋದು ಸಂಜೆ ೪.೩೦ಕ್ಕೆ. ಆ ಬಳಿಕವೂ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸೋ ಹೃದಯವಂತಿಕೆ ನಿಮ್ಮಲ್ಲಿ ಇರಲಿಲ್ಲ. ಒಂದೇ ವಾದ, ಮೃತದೇಹ ಕಳಿಸಿ ಕೊಡಬೇಕು, ಕೊಟ್ಬಿಡಿ ಅಂತಾ.! ರೀ ಸ್ವಾಮಿ, ಮೃತದೇಹವನ್ನ ಅಲ್ಲಿ ಯಾರು ನಮಗೆ ಕೊಡಿ ಅಂತಾ ಇಟ್ಕೊಂಡ್ ಪ್ರತಿಭಟನೆ ಮಾಡ್ತಾ ಇರ್ಲಿಲ್ಲ. ಬದಲಾಗಿ, ಹೊಟ್ಟೆಪಾಡಿಗಾಗಿ ಊರಿಂದೂರಿಗೆ ಬಂದಿದ್ದ ಆ ತಾಯಿ, ಆ ರೀತಿ ಕಾಡಾನೆ ದಾಳಿಗೆ ಬಲಿಯಾಗಿದ್ದಾಳೆ.. ಕೊನೆಪಕ್ಷ, ಆ ಕುಟಂಬಕ್ಕೆ ಒಂದು ಒಳ್ಳೆ ಪರಿಹಾರ ಕೊಡಿ. ನಿಮ್ಮ ಬೇಜವಾಬ್ದಾರಿತನದಿಂದ ಈ ಘಟನೆ ಆಗಿರೋದ್ರಿಂದ ಸರ್ಕಾರದ ಘೋಷಿತ ಪರಿಹಾರ ೨೦ಲಕ್ಷಕ್ಕಿಂತ ಜಾಸ್ತಿ ಕೊಡಿ ಅನ್ನೋದಾಗಿತ್ತು. ಜೊತೆಗೆ, ಈ ರೀತಿಯ ಘಟನೆಗೆ ಶಾಶ್ವತ ಬ್ರೇಕ್ ಹಾಕಿ ಅನ್ನೋದಾಗಿತ್ತು..! ಕೊನೆಪಕ್ಷ, ಒಂದ್ಸರಿ, ಒಂದೇ ಒಂದು ಸರಿ, ಕೇವಲ ಒಂದು ನಿಮಿಷ ಅರಣ್ಯ ಸಚಿವರಿಗೆ ಕರೆ ಮಾಡಿ, ಭರವಸೆಯ ಮಾತನ್ನಾದ್ರೂ ಆಡಿಸಿ ಅನ್ನೋದಾಗಿತ್ತು.. ಇದ್ರಲ್ಲಿ ಯಾವುದನ್ನ ಒಂದಾದ್ರೂ ತಾವುಗಳು ಮಾಡಿದ್ರಾ..?

ಖಂಡಿತಾ ಇಲ್ಲ, ಸರಿ ಇದ್ಯಾವ್ದನ್ನೂ ಮಾಡ್ಲಿಲ್ಲ ನೀವುಗಳು.. ಬೆಳಗ್ಗೆಯಿಂದ ಬಿಸಿಲಲ್ಲಿ ಕುಳಿತು ಅನ್ನನೀರು ಬಿಟ್ಟು ಪ್ರತಿಭಟಿಸುತ್ತಿದ್ದ ಅನ್ನದಾತರ ಜೊತೆ ಸೌಜನ್ಯದ ರೀತಿಯಲ್ಲಿ ಮಾತಾನಾಡುವ ಪ್ರಯತ್ನ ಮಾಡಿದ್ರಾ..? ಯಾವುದೂ ಇಲ್ಲ, ಮಾತ್ತೆತ್ತಿದ್ರೆ, ವಾದ, ಸಿಟ್ಟು-ಸೆಡವನ್ನ ಹೊರಹಾಕಿದ್ರೆ, ಒಂದು ಕ್ಷಣದಲ್ಲಿ ಜಿಲ್ಲಾಧಿಕಾರಿಗಳು ಮೈಕ್ ಎಸೆದು ಹೊರಡ್ತೀನಿ ಅನ್ನೋ ಸನ್ನೆ ಕೊಟ್ಟೀರಿ..! ನಿಮ್ಮ ಈ ರೀತಿಯ ನಡೆವಳಿಕೆಗಳೇ ಅನ್ನದಾತರನ್ನ ಕಿಚ್ಚನ್ನ ಮತ್ತಷ್ಟು ಹೆಚ್ಚಿಸಿದ್ದು. ಅಷ್ಟೆಲ್ಲಾ ನೋವನ್ನ ಉಂಡ ರೈತರು, ಕೇಳುತ್ತಿದ್ದ ಯಾವ ಮನವಿಯೂ ಸರಿ ಇಲ್ಲ ಅನ್ನೋ ಹಾಗೇ ಇರಲಿಲ್ಲ.! ರೈತರ ಸಮಸ್ಯೆಯ ಗಂಧಗಾಳಿ ಅರಿಯದ ನೀವುಗಳು, ಇವ್ರು ಮಧ್ಯಾಹ್ನದವರೆಗೆ ಪ್ರತಿಭಟಿಸಬಹುದು ಆಮೇಲೆ ಜಾಗ ಖಾಲಿ ಮಾಡ್ತಾರೆ.. ನಾನ್ಯಾಕೆ ಆ ಜಾಗಕ್ಕೆ ಹೋಗ್ಬೇಕು ಅನ್ನೋ ಪ್ರತಿಷ್ಠೆ ಮೆರೆದ್ರಿ… ಆದ್ರೆ , ನಮ್ಮ ರೈತರು ಜಗ್ಗಲಿಲ್ಲ, ಬಗ್ಗಲಿಲ್ಲ. ನಿಮಗೆ ಬೇರೆ ದಾರಿ ಕಾಣದೇ ಅನಿವಾರ್ಯವಾಗಿ ಸಂಜೆ ಬಂದ್ರಿ..

ಬಂದ್ಮೇಲೂ ನಿಮ್ಮ ಇಂಗಿತ ಪರಿಹಾರ ಕಂಡುಕೊಳ್ಳುವುದು ಆಗಿರಲಿಲ್ಲ. ಬದಲಾಗಿ, ಸಮಸ್ಯೆಯನ್ನ ಸೃಷ್ಠಿ ಮಾಡೋದು, ಪ್ರತಿಭಟನೆಯನ್ನ ಹತ್ತಿಕ್ಕುವುದು ಆಗಿತ್ತು ಅನ್ನೋದು ಸುಸ್ಪಷ್ಟ. ಒಂದು ವೇಳೆ ಆ ರೀತಿಯ ಮನಸ್ಥಿತಿ ನಿಮ್ಮದು ಆಗಿರಲಿಲ್ಲ ಅಂದ್ರೆ, ಮೇಲೆ ಹೇಳಿದ ರೈತರ ಒಂದಾದ್ರೂ ಮನವಿಗೆ ನೀವುಗಳು ಸ್ಪಂದಿಸುತ್ತಿದ್ರಿ.. ಕೊನೆಪಕ್ಷ, ಶಾಂತಿಯುತವಾಗಿ ಮಾತನಾಡಿ ರೈತರನ್ನ ಸಮಾಧಾನ ಪಡಿಸ್ತಾ ಇದ್ದೀರಿ. ಅದ್ಯಾವ್ದನ್ನೂ ಮಾಡದೇ ಲಾಠಿಚಾರ್ಜ್ ಗೆ ಆದೇಶ ಮಾಡಿದ್ದು ನಿಜಕ್ಕೂ ರೈತರ ಮೇಲೆ ಚಿಕ್ಕಮಗಳೂರು ಜಿಲ್ಲಾಡಳಿತ ನಡೆಸಿದ ‘ದೌರ್ಜನ್ಯವೇ’ ಸರಿ.! ರೈತರು ಕಲ್ಲು ಹೊಡಿದಿರಲಿಲ್ಲ, ಬೆಂಕಿ ಹಚ್ಚಿರಲಿಲ್ಲ, ಯಾರ ಮೇಲೂ ಕೈ ಮಾಡಿರಲಿಲ್ಲ.. ಅಂತಹ ರೈತರ ಮೇಲೆ ನೀವು ಲಾಠಿ ಪ್ರಹಾರ ಮಾಡ್ತೀರಿ ಅಂದ್ರೆ ನೀವೆಂತಾ ಕಠೋರಿಗಳು..

ಇಷ್ಟು ಸಾಲದೆಂಬಂತೆ ಅಮಾಯಕರು ಲಾಠಿ ಏಟು ತಿಂದು ನರಳಾಟ ನಡೆಸ್ತಾ ಇದ್ರೆ, ಅದನ್ನ ನೋಡಿ ‘ಎಂಜಾಯ್’ ಮಾಡ್ತೀರಿ.. ‘ಅಟ್ಟಹಾಸ’ದ ನಗು ಬೀರುತ್ತೀರಿ.. ನಿಮ್ಮ ಈ ದರ್ಪ, ಪ್ರತಿಭಟನೆಯನ್ನ ಹತ್ತಿಕ್ಕೇ ಬಿಟ್ವು ಅನ್ನೋ ವಿಕೃತ ಆನಂದ ಎಲ್ಲವೂ ಪಬ್ಲಿಕ್ ಇಂಪ್ಯಾಕ್ಟ್ ಕ್ಯಾಮರದಲ್ಲಿ ಸೆರೆಯಾಗಿದೆ..! ರೈತರ ಮೇಲಿನ ‘ದಬ್ಬಾಳಿಕೆ’ಯನ್ನ ‘ಪಬ್ಲಿಕ್ ಇಂಪ್ಯಾಕ್ಟ್’ ಸಹಿಸೋದಿಲ್ಲ, ಚಿಕ್ಕಮಗಳೂರಿನ ಜನರು, ರಾಜ್ಯದ ಜನರು ಮರೆಯೋದಿಲ್ಲ. ಇದು ಅಕ್ಷಮ್ಯ ಅಪರಾಧ.! ಬೇಷರತ್ತಾಗಿ ರೈತರ ಕ್ಷಮೆಯನ್ನ ಕೇಳಿ..! ಜೊತೆಗೆ ಅಮಾಯಕರ ಮೇಲೆ ಉದ್ದೇಶಪೂರ್ವಕವಾಗಿ ಹಾಕಿರೋ ಜಾಮೀನು ರಹಿತ ಕೇಸುಗಳನ್ನ ಕೂಡಲೇ ಹಿಂಪಡೆಯಿರಿ.! ಅನ್ನದಾತರಿದ್ರೆ ನಾವು, ಅವರ ಮೇಲೆ ಕೈ ಎತ್ತಿದ್ದವರು ಉಳಿದುಕೊಂಡ ಇತಿಹಾಸವೇ ಇಲ್ಲ.! ಯೋಚಿಸಿ.!

ವರದಿ: ಪ್ರಶಾಂತ್ ಮೂಡ್ಗೆರೆ
ಪಬ್ಲಿಕ್ ಇಂಪ್ಯಾಕ್ಟ್.!

9916917520

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!