Wednesday, October 14, 2026
Homeಕ್ರೈಮ್ಖಾಕಿ ಖೆಡ್ಡಾಗೆ ಬಿದ್ದ ಕಪಟ ಅರ್ಚಕ ಪಾತ್ರಿ : ಬಂಧನದ ರೋಚಕ ಕಾರ್ಯಾಚರಣೆ ಬಿಚ್ಚಿಟ್ಟ ಎಸ್ಪಿ!

ಖಾಕಿ ಖೆಡ್ಡಾಗೆ ಬಿದ್ದ ಕಪಟ ಅರ್ಚಕ ಪಾತ್ರಿ : ಬಂಧನದ ರೋಚಕ ಕಾರ್ಯಾಚರಣೆ ಬಿಚ್ಚಿಟ್ಟ ಎಸ್ಪಿ!

Telegram Group
Join Now

ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ಅರ್ಚಕ ಸತೀಶ್ ಪಾತ್ರಿಯನ್ನು ಪೊಲೀಸರು ಕೊನೆಗೂ ಬೆಂಗಳೂರಿನ ಪಿಜಿಯೊಂದರಲ್ಲಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊಪ್ಪ ಮತ್ತು ಎನ್.ಆರ್.ಪುರ ಪೊಲೀಸ್ ಠಾಣೆಗಳಲ್ಲಿ ಅತ್ಯಾಚಾರ ಸೇರಿದಂತೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಗ್ರಾಮಸ್ಥರ ದೂರಿನ ಮೇರೆಗೆ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

​ಬಂಧನ ಭೀತಿಯಿಂದ ಪದೇಪದೇ ಮೊಬೈಲ್ ಹಾಗೂ ಸಿಮ್ ಬದಲಾಯಿಸುತ್ತಾ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈತನನ್ನು ಡಿಜಿಟಲ್ ಸಾಕ್ಷ್ಯ ಹಾಗೂ ಐಎಂಇಐ ಲೊಕೇಶನ್ ಆಧರಿಸಿ ಪೊಲೀಸರು ಸೆರೆಹಿಡಿದಿದ್ದಾರೆ. ಅತ್ಯಾಚಾರದಂತಹ ಗಂಭೀರ ಪ್ರಕರಣದ ಆರೋಪಿಗೆ ಆಶ್ರಯ ನೀಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಾಯ್ಮಾ ಸ್ಪಷ್ಟಪಡಿಸಿದ್ದಾರೆ.

​ಇದೇ ವೇಳೆ ತನಿಖಾ ತಂಡದ ಚಲನವಲನದ ಮಾಹಿತಿಯನ್ನು ಆರೋಪಿಗೆ ಸೋರಿಕೆ ಮಾಡಿದ ಆರೋಪದ ಮೇಲೆ ಪೊಲೀಸ್ ಪೇದೆ ಕಾಂತೇಶ್ ವಿರುದ್ಧ ಇಲಾಖಾ ವಿಚಾರಣೆ ಆರಂಭವಾಗಿದ್ದು, ಸಂತ್ರಸ್ತರಿಗೆ ಕೌನ್ಸಿಲಿಂಗ್ ಮತ್ತು ಸೂಕ್ತ ನೆರವು ನೀಡಲಾಗುತ್ತಿದೆ. ತನಿಖೆ ಮುಗಿದ ಬಳಿಕ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!