Tuesday, August 11, 2026
Homeಕ್ರೈಮ್ಹಾಸನದಲ್ಲಿ ಮತ್ತೆ ಹೆಚ್ಚಾದ ಫೈನಾನ್ಸ್ ಹಾವಳಿ: ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

ಹಾಸನದಲ್ಲಿ ಮತ್ತೆ ಹೆಚ್ಚಾದ ಫೈನಾನ್ಸ್ ಹಾವಳಿ: ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

Telegram Group
Join Now

ಸಕಲೇಶಪುರ: ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಕಲೇಶಪುರದ ಸಿಡಗಳಲೆ ಗ್ರಾಮದಲ್ಲಿ ಕಂಡು ಬಂದಿದೆ.

ಹೌದು .. ಸಕಲೇಶಪುರ ತಾಲೂಕಿನ ಸಿಡಗಳಲೆ ಗ್ರಾಮದಲ್ಲಿ ಸಾಲದ ಕಂತು ಪಾವತಿಸಲು ಒತ್ತಡ ಹೇರುವ ಖಾಸಗಿ ಫೈನಾನ್ಸ್ ಸಂಸ್ಥೆಯ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುಟ್ಟಲಕ್ಷ್ಮೀ (45) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿರುತ್ತಾರೆ.

ಹಾಸನದ ವಾಸ್ತು ಹೌಸಿಂಗ್ ಫೈನಾನ್ಸ್ ನಿಂದ ಮನೆ ಸಾಲ ಪಡೆದಿದ್ದ ಪುಟ್ಟಲಕ್ಷ್ಮೀ, ಕಳೆದ ಒಂದು ವರ್ಷದಿಂದ ನಿರಂತರವಾಗಿ ಕಂತು ಪಾವತಿಸುತ್ತಿದ್ದರು. ಅನಾರೋಗ್ಯದಿಂದ ಒಂದು ತಿಂಗಳ ₹15,100 ಕಂತು ವಿಳಂಬವಾದ ಕಾರಣ ಕಂಪನಿ ಸಿಬ್ಬಂದಿಯಿಂದ ನಿರಂತರ ಒತ್ತಡ ಹಾಕುತ್ತಿದ್ದರು.


ಇದರಿಂದ ಮನನೊಂದ ಮಹಿಳೆ ಅಕ್ಟೋಬರ್ 1ರಂದು ವಿಷ ಸೇವನೆ ಮಾಡಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆಸಾವನ್ನಪ್ಪಿದ್ದಾರೆ.

ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪತಿ ಮಲ್ಲೇಶ್ ನೀಡಿದ ದೂರಿನ ಮೇರೆಗೆ ಫೈನಾನ್ಸ್ ವ್ಯವಸ್ಥಾಪಕ ಹಾಗೂ ಇಬ್ಬರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಪ್ರಗತಿಪರ ಸಂಘಟನೆಗಳಿಂದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments