Thursday, September 3, 2026
Homeಜಿಲ್ಲಾಸುದ್ದಿಸಾಲು ಸಾಲು ಹಬ್ಬಗಳ ಸಂಭ್ರಮಕ್ಕೆ ಸಿಹಿಸುದ್ದಿ: ಹುಬ್ಬಳ್ಳಿ - ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್...

ಸಾಲು ಸಾಲು ಹಬ್ಬಗಳ ಸಂಭ್ರಮಕ್ಕೆ ಸಿಹಿಸುದ್ದಿ: ಹುಬ್ಬಳ್ಳಿ – ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್ ರೈಲು ಸಂಚಾರ!

Telegram Group
Join Now

ಚಿಕ್ಕಮಗಳೂರು : ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಸುಲಭವಾಗಿ ನಿರ್ವಹಿಸಲು ರೈಲ್ವೆ ಇಲಾಖೆಯೂ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನ ತೋರಿದ.

ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರದಂದು ರೈಲು ಸಂಖ್ಯೆ 07341/07342 ಎಕ್ಸ್‌ಪ್ರೆಸ್ ರೈಲುಗಳು ಎರಡೂ ನಗರಗಳ ನಡುವೆ ಕಾರ್ಯಾಚರಣೆ ನಡೆಸಲಿವೆ.

ಹುಬ್ಬಳ್ಳಿಯಿಂದ ಬೆಳಗ್ಗೆ 05:00 ಗಂಟೆಗೆ ಹೊರಡುವ ರೈಲು ಸಂಖ್ಯೆ 07341, ಕುಂದಗೋಳ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಅಜ್ಜಂಪುರ, ಬೀರೂರು ಹಾಗೂ ಕಡೂರು ಸೇರಿದಂತೆ ಪ್ರಮುಖ ನಿಲ್ದಾಣಗಳ ಮೂಲಕ ಸಾಗಿ ಬೆಳಗ್ಗೆ 11:15ಕ್ಕೆ ಚಿಕ್ಕಮಗಳೂರು ತಲುಪಲಿದೆ.

ಮರಳಿ ಪ್ರಯಾಣಿಸುವ ರೈಲು ಸಂಖ್ಯೆ 07342 ಚಿಕ್ಕಮಗಳೂರಿನಿಂದ ಸಂಜೆ 17:30ಕ್ಕೆ ಹೊರಟು, ಅದೇ ಮಾರ್ಗದ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ರಾತ್ರಿ 23:20ಕ್ಕೆ ಹುಬ್ಬಳ್ಳಿ ತಲುಪಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲಿನಲ್ಲಿ ಒಂದು ಸ್ವೀಪರ್ ಕ್ಲಾಸ್, ಏಳು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ ಎರಡು ಲಗೇಜ್-ಕಮ್-ದಿವ್ಯಾಂಗ ಬೋಗಿಗಳನ್ನು ಅಳವಡಿಸಲಾಗಿದ್ದು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಈ ಸೇವೆ ಹೆಚ್ಚು ಅನುಕೂಲವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments