ಮೂಡಿಗೆರೆ : ಗೃಹ ಮಂಡಳಿ ಮಾಜಿ ಅಧ್ಯಕ್ಷ ಜಿ.ಹೆಚ್.ಹಾಲಪ್ಪಗೌಡರು ಅಧ್ಯಕ್ಷರಾಗಿದ್ದ ಸಮಯದಲ್ಲಿ ನಾನು ನಿರ್ದೆಶಕನಾಗಿದ್ದಾಗ ಬೆಂಗಳೂರಿನಲ್ಲಿದ್ದ ಹಾಲಪ್ಪಗೌಡರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಹಾಲಪ್ಪಗೌಡರ ಧರ್ಮಪತ್ನಿ ವಿಮಲಾ ಹಾಲಪ್ಪಗೌಡರು ನಗುನಗುತ್ತಾ ಸ್ವಾಗತಿಸಿ ಆತ್ಮೀಯತೆ ಮತ್ತು ಪ್ರೀತಿ ನನ್ನ ಜೀವಮಾನದಲ್ಲಿ ಮರೆಯಲಾಗದ ವಿಷಯವಾಗಿದೆ ಎಂದು ವಿರೋಧ ಪಕ್ಷದ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿ ತಿಳಿಸಿದರು.

ಇಂದು ಪಟ್ಟಣದ ವಿದ್ಯಾನಗರದಲ್ಲಿರುವ ಜಿ.ಹೆಚ್.ಹಾಲಪ್ಪಗೌಡರ ಮನೆಗೆ ಭೇಟಿ ನೀಡಿ ಇತ್ತೀಚೆಗೆ ಅಗಲಿದ ಹಾಲಪ್ಪಗೌಡರ ಧರ್ಮಪತ್ನಿ ವಿಮಾಲಹಾಲಪ್ಪಗೌಡರನ್ನು ಸ್ಮರಿಸಿದ ಪರಿ ಇದಾಗಿತ್ತು.
ವಿಮಲಾ ರವರು ಇಂದು ನಮ್ಮೊಂದಿಗಿಲ್ಲಾ ಆದರೆ ನನ್ನ ಮತ್ತು ಹಾಲಪ್ಪಗೌಡರ ಸಂಬಧ ಸುಮಾರು ೨೫ ವರ್ಷಗಳ ಕಾಲದಾಗಿದ್ದು ವಿಮಲಾ ಹಾಲಪ್ಪಗೌಡರ ಆತ್ಮಿಯತೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲಾ ಎಂದರು.
.ಹೆಚ್.ಹಾಲಪ್ಪಗೌಡರು ಸಾಮನ್ಯರೇನು ಅಲ್ಲಾ ನಾವು ಎಷ್ಟೆ ಆತ್ಮಿಯತೆ ಇದ್ದರೂ ಚುನಾವಣೆ ಸಂದರ್ಭದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದು ಇವರೇ. ಮಾಜಿ ಮಂತ್ರಿ ಬಿ.ಬಿ.ನಿಂಗಯ್ಯ ಅವರನ್ನು ತಮ್ಮ ಕಡೆಗೆ ಕರೆತಂದು ದೊಡ್ಡ ಸುನಾಮಿಯನ್ನು ಸೃಷ್ಟಿಸಿ ೩೫೦೦ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ನಯನ ಮೋಟಮ್ಮ ಅವರ ಗೆಲುವಿಗೆ ಕಾರಣ ಕರ್ತರಾಗಿದ್ದಾರೆ ಎಂದರು
ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ. ಹಾಲಪ್ಪಗೌಡರು ರಾಜಕೀಯ ಜೀವನದಲ್ಲಿ ಹಲವು ಹತ್ತು ಉಪಯುಕ್ತ ಜನೊಪಯೋಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದರೆ ಅವರ ಪತ್ನಿ ವಿಮಲಾ ಹಾಲಪ್ಪಗೌಡರು ಮನೆಗೆ ಯಾರೇ ಬರಲಿ ಅವರನ್ನು ಅಷ್ಟೇ ಆತ್ಮಿಯತೆಯಿಂದ ನೋಡಿಕೊಳ್ಳುವುದರೊಂದಿಗೆ ನಾವು ನಮ್ಮ ಮನೆಯಲ್ಲೇ ಇದ್ದಿವೇಯೋ ಎಂಬಂತೆ ಆತ್ಮಿಯತೆ ಇಂದು ಬರಿ ಕನಸೆಂಬಂತಾಗಿದೆ.
ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ದೊರಕಿಸಲಿ ಎಂದು ಹಾಲಪ್ಪಗೌಡರಿಗೆ ಸಮಾಧಾನ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಪೂರ್ಣೇಶ್, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಕಾಂಗ್ರೆಸ್ ಮುಖಂಡ ಮೊಯಿದ್ದಿನ್ ಶೇಠ್ ಸೇರಿದಂತೆ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.
