ಮೂಡಿಗೆರೆ: ಹಲವು ವರ್ಷಗಳಿಂದ ಅಂಗಡಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಗೊಂಡ ಶ್ರೀಯುತ ವೆಂಕಟೇಶ ಅವರನ್ನು ಹಂತೂರು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಕಣಚೂರು ಮಾತನಾಡಿ, ದೈಹಿಕ ಶಿಕ್ಷಣವೆಂಬುದು ಶಿಕ್ಷಣ ಕ್ಷೇತ್ರದಲ್ಲಿ ಅಮೋಘವಾದದ್ದು. ಇವರ ಸೇವೆಯನ್ನು ನಾವುಗಳು ಸದಾ ಸ್ಮರಿಸಬೇಕು ನಿವೃತ್ತಿ ಜೀವನ ಸುಖಮಯ ಮತ್ತು ಸಂತೋಷವಾಗಿರಲಿ ಎಂದು ಶುಭ ಹಾರೈಸಿದರು.
ಹಾಗೆ ಹಂತೂರು ಪಶು ಆಸ್ಪತ್ರೆಯ ವೈದ್ಯರಾಗಿ ಕಾರ್ಯ ನಿರ್ವಹಿಸಿ ವರ್ಗಾವಣೆ ಗೊಂಡ ಪಶು ವೈದ್ಯ ಶ್ರೀಯುತ ವೆಂಕಟೇಶ್. ಟಿ. ಅವರನ್ನು ಕೂಡ ಈ ವೇಳೆ ಗೌರವಿಸಲಾಯಿತು, ಮೂಕ ಪ್ರಾಣಿಗಳ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನೂ ಅತ್ಯಂತ ನಿಷ್ಠೆ ಶ್ರದ್ಧೆಯಿಂದ ನಿರ್ವಹಿಸಿ ಉತ್ತಮ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆ ನಂತರ ಹಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ನಾಗರಾಜ್, ಉಪಾಧ್ಯಕ್ಷೆ ಪಾರ್ವತಮ್ಮ, ಮುಖ್ಯ ಕಾರ್ಯ ನಿರ್ವಣಧಿಕಾರಿ ಚೇತನ್, ಗ್ರಾಮ ಪಂಚಾಯಿತಿ ಸದಸ್ಯ ಆದರ್ಶ್, ಪಶು ಆಸ್ಪತ್ರೆ ಸಿಬ್ಬಂದಿ ಸಚಿನ್,ಸೇರಿದಂತೆ ಪಂಚಾಯಿತಿ ಸದಸ್ಯರು. ಪಶು ಆಸ್ಪತ್ರೆ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.