Monday, July 6, 2026
Homeಜಿಲ್ಲಾಸುದ್ದಿಜಯಪುರ: ಮಳೆ ಗಾಳಿಗೆ ರಸ್ತೆಗೆ ಬಿದ್ದ ಮರ: ಗ್ರಾಮಸ್ಥರಿಂದ ತೆರವು ಕಾರ್ಯ!

ಜಯಪುರ: ಮಳೆ ಗಾಳಿಗೆ ರಸ್ತೆಗೆ ಬಿದ್ದ ಮರ: ಗ್ರಾಮಸ್ಥರಿಂದ ತೆರವು ಕಾರ್ಯ!

Telegram Group
Join Now

ಜಯಪುರ: ಮಲೆನಾಡಿನಲ್ಲಿ ಮಳೆ ಅಬ್ಬರ ಜೋರಾಗಿದ್ದು ಇಂದು ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್‌ ಆಗಿದ್ದ ಘಟನೆ ಮೇಗೂರಿನಿಂದ-ಕೊಗ್ರೆ ಸಂಪರ್ಕಿಸುವ ಮಾರ್ಗದಲ್ಲಿ ಕಂಡುಬಂದಿತು.

ಹೌದು .. ಈ ರಸ್ತೆ ಹೊರನಾಡು – ಶೃಂಗೇರಿ ಸಂಪರ್ಕಿಸುವ ರಸ್ತೆಯೂ ಆಗಿರುವುದರಿಂದ ಪ್ರವಾಸಿ ವಾಹನಗಳಿಂದ ಹಿಡಿದು, ಕೆಲಸಕ್ಕೆ ಕರೆದುಕೊಂಡು ಹೋಗುವ ವಾಹನಗಳು ತೊಂದರೆ ಅನುಭವಿಸುವಂತಾಗಿತ್ತು.ಹಾಗೆ ಮರ ಬಿದ್ದ ಸ್ಥಳದಲ್ಲೇ ಇನ್ನೆರಡು ಒಣಗಿದ ಮರವೂ ಇದ್ದು ಅದರ ಕೊಂಬೆಗಳು ಆಗಾಗ ಬಿದ್ದು ಸಮಸ್ಯೆಯಾಗುತ್ತಿದ್ದಿದನ್ನು ಮನಗಂಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಹಾಗೂ ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ ತೆರವುಗೊಳಿಸಲಾಯಿತು.

ಈ ಬಗ್ಗೆ ಅಲ್ಲಿನ ಸ್ಥಳಿಯ ವ್ಯಕ್ತಿ ಅಭಿಗೌಡ ಕಾರೊಳ್ಳಿ ಮಾತನಾಡಿ, ಮರ ಬಿದ್ದ ಸ್ಥಳದಲ್ಲೇ ಬಹಳ ವರ್ಷಗಳಿಂದ ಬೃಹತ್ತಾಕಾರದ ಮರವೊಂದು ಒಣಗಿ ಅದರ ಕೊಂಬೆಗಳು ಆಗಾಗ ಮುರಿದು ಬೀಳುತಿತ್ತು ಅದರಿಂದ ವಾಹನ ಸವಾರರಿಗೆ, ಶಾಲೆಗೆ ತೆರಳುವ ಮಕ್ಕಳಿಗೆ ಸಮಸ್ಯೆಯಾಗುತ್ತಿತ್ತು. ಈಗ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರ ಹಾಗೂ ಹಾಲಿ ಸದ್ಯಸರ ಮತ್ತು ಅರಣ್ಯಾಧಿಕಾರಿಗಳ ಸಹಕಾರದಿಂದ ಆ ಮರವನ್ನು ತೆರವು ಮಾಡಿರುವುದರಿಂದ ಗ್ರಾಮಸ್ಥರಿಗೆ ಬಹಳ ಅನುಕೂಲವಾಗಿದೆ ಎಂದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments