Sunday, July 5, 2026
Homeಜಿಲ್ಲಾಸುದ್ದಿಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಉರುಳಿದ ಕಾರು: ಐವರು ಪ್ರಾಣಾಪಾಯದಿಂದ ಪಾರು!

ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಉರುಳಿದ ಕಾರು: ಐವರು ಪ್ರಾಣಾಪಾಯದಿಂದ ಪಾರು!

Telegram Group
Join Now

ಕಳಸ : ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಉರುಳಿದ ಕಾರು ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ‌ ತಾಲೂಕಿನ ಬೈನೇಕಾಡು ಹೋಂ ಸ್ಟೇ ಬಳಿ ನಡೆದಿದೆ.

ಹೌದು .. ಹೊರನಾಡಿನಿಂದ ಉಡುಪಿಗೆ ಹೋಗುತ್ತಿದ್ದ ವ್ಯಾಗನರ್ ಕಾರು ನಿರಂತರ ಮಳೆಯಿಂದ ಬೈಕಿಗೆ ಸೈಡ್ ಕೊಡಲು ಹೋಗಿ ಸ್ಕಿಡ್ ಆಗಿ ತೋಟಕ್ಕೆ ಉರುಳಿದ ಕಾರು ಕೂಡಲೇ ಸ್ಥಳೀಯರಿಂದ ಕಾರಿನಲ್ಲಿದ್ದವರ ರಕ್ಷಣೆ ಮಾಡಲಾಗಿದೆ.

ಮಲೆನಾಡಿನ ಕಿರಿದಾದ ಮತ್ತು ಕಡಿದಾದ ರಸ್ತೆಗಳಲ್ಲಿ ವೇಗವನ್ನು ಮಿತಿಯಲ್ಲಿಡಿ. ತೇವಾಂಶದಿಂದ ರಸ್ತೆಗಳು ಜಾರುವಂತಿದ್ದು, ವಾಹನದ ಹಿಡಿತ ತಪ್ಪುವ ಸಾಧ್ಯತೆ ಹೆಚ್ಚಾಗಿರುವುದರಿಂದ ವಾಹನಗಳನ್ನ ನಿಧಾನವಾಗಿ ಚಲಾಯಿಸುವಂತೆ ಸ್ಥಳಿಯರು ಮನವಿ ಮಾಡಿದ್ದಾರೆ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments