Sunday, July 5, 2026
Homeಜಿಲ್ಲಾಸುದ್ದಿಜುಲೈ 6ರಿಂದ ಕೊಪ್ಪ–ಬಾಳಗಡಿ, ಕೊಪ್ಪ–ಶೃಂಗೇರಿ ನಡುವೆ ಹೊಸ KSRTC ಬಸ್ ಸೇವೆ

ಜುಲೈ 6ರಿಂದ ಕೊಪ್ಪ–ಬಾಳಗಡಿ, ಕೊಪ್ಪ–ಶೃಂಗೇರಿ ನಡುವೆ ಹೊಸ KSRTC ಬಸ್ ಸೇವೆ

Telegram Group
Join Now

ಕೊಪ್ಪ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಜುಲೈ 6ರಿಂದ ಕೊಪ್ಪ–ಬಾಳಗಡಿ ಹಾಗೂ ಕೊಪ್ಪ–ಬಿ.ಜಿ. ಕಟ್ಟೆ–ಉತ್ತಮೇಶ್ವರ–ಎತ್ತಿನಟ್ಟಿ–ಶೃಂಗೇರಿ ಮಾರ್ಗಗಳಲ್ಲಿ ಎರಡು ಹೊಸ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಗಲಿದೆ.

ಹೌದು .. ಬಾಳಗಡಿಯಲ್ಲಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸರ್ಕಾರಿ ಕಚೇರಿಗಳಿರುವ ಹಿನ್ನೆಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೊಪ್ಪ–ಬಾಳಗಡಿ ನಡುವೆ ಹಲವು ಟ್ರಿಪ್‌ಗಳನ್ನು ನಿಗದಿಪಡಿಸಲಾಗಿದೆ. ಜೊತೆಗೆ ಕೊಪ್ಪ–ನಾರ್ವೆ–ಬಿ.ಜಿ. ಕಟ್ಟೆ–ಉತ್ತಮೇಶ್ವರ–ಎತ್ತಿನಟ್ಟಿ–ಅಗಳಗಂಡಿ ಮಾರ್ಗವಾಗಿ ಶೃಂಗೇರಿಗೂ ನೇರ ಬಸ್ ಸೇವೆ ಕಲ್ಪಿಸಲಾಗಿದೆ.

ಈ ಹೊಸ ಬಸ್ ಸೇವೆ ಕಲ್ಪಿಸಲು ಸಹಕರಿಸಿದ ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಸ್ವಾಮಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಿಗೆ ಕೊಪ್ಪ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments