Saturday, July 11, 2026
Homeಜಿಲ್ಲಾಸುದ್ದಿಹಾಸನ: ನಗರದಲ್ಲಿ ಮತ್ತೋರ್ವ ತಾಯಿ ತ್ರಿವಳಿ ಮಕ್ಕಳಿಗೆ ಜನನ!

ಹಾಸನ: ನಗರದಲ್ಲಿ ಮತ್ತೋರ್ವ ತಾಯಿ ತ್ರಿವಳಿ ಮಕ್ಕಳಿಗೆ ಜನನ!

Telegram Group
Join Now

ಹಾಸನ: ನಗರದಲ್ಲಿ ಮತ್ತೋರ್ವ ತಾಯಿ ತ್ರಿವಳಿ ಮಕ್ಕಳಿಗೆ ಜನನ ಕೊಟ್ಟಿದ್ದು , ಇದೇ ತಿಂಗಳಿನಲ್ಲಿ ಇದು ಎರಡನೇ ವರದಿಯಾಗಿದೆ.

ಹೌದು.. ಹಾಸನ ಜಿಲ್ಲೆಯ ಕಟ್ಟಾಯ ಮೂಲದ ತಾಯಿ ಒಬ್ಬರಿಗೆ ನಗರದ ಶಿವ್ಯ ಐವಿಎಫ್‌ ಆಸ್ಪತ್ರೆಯಲ್ಲಿ 40 ವರ್ಷದ ಆ ತಾಯಿಗೆ , 16 ವರ್ಷಗಳ ವೈವಾಹಿಕ ಜೀವನದ ಬಳಿಕ ಸಂತಾನೋತ್ಪತ್ತಿ ಚಿಕಿತ್ಸೆಯನ್ನು ಪಡೆದು, 15/09/2025 ರಂದು 35 ವಾರಗಳ ಗರ್ಭಧಾರಣೆಯಲ್ಲಿ ಸೀಸೇರಿಯನ್ ಮೂಲಕ ಆರೋಗ್ಯವಂತ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು.

ಜನನದ ವೇಳೆ ಮಕ್ಕಳ ತೂಕ ಕ್ರಮವಾಗಿ 1.8 ಕೆ.ಜಿ.1.5 ಕೆ.ಜಿ. ಮತ್ತು 1.1ಕೆ.ಜಿ.ಗಳಾಗಿತ್ತು. ಮೂರು ಮಕ್ಕಳು ಆರೋಗ್ಯವಾಗಿದ್ದು ಶಿವ್ಯ ಐವಿಎಫ್ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ (NICU) 8 ದಿನಗಳ ವಿಶೇಷ ಆರೈಕೆಯನ್ನು ಪಡೆದಿದ್ದಾರೆ.

ಇದೀಗ ಸಂಪೂರ್ಣ ಆರೋಗ್ಯದಿಂದ ತಮ್ಮ ತಾಯ್ತಂದೆಯ ಪ್ರೀತಿಯ ಮಡಿಲಿಗೆ ಸೇರಿದ್ದಾರೆ. ಡಾ. ಭವ್ಯ ಸುನಿಲ್‌ ( ಪ್ರಸೂತಿ ತಜ್ಞ ) ಮತ್ತು ಡಾ. ಸುನಿಲ್ ಕುಮಾರ್ ಅವರು ತಾಯಿ ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments