ಹಾಸನ : ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ತಾಲ್ಲೂಕಿನ ನಂದಿಪುರ ಗ್ರಾಮದ ರಂಜನ್ (22) ಸಾವನ್ನಪ್ಪಿದ್ದು ಇಬ್ಬರ ಸ್ಥಿತಿ ಗಂಭಿರವಾಗಿದೆ.
ಹೌದು .. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರು ಸಮೀಪದ ಅರಸಿಕಟ್ಟೆ ದೇವಸ್ಥಾನಕ್ಕೆ ಗೆಳೆಯರೊಂದಿಗೆ ಕಾರಿನಲ್ಲಿ ರಂಜನ್ ಹೋಗಿದ್ದರು. ನಂದಿಪುರಕ್ಕೆ ವಾಪಸಾಗುತ್ತಿದ್ದಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ವಿಭಜಕಕ್ಕೆ ಅಳವಡಿಸಿದ್ದ ಸರಳು ರಂಜನ್ ದೇಹಕ್ಕೆ ಹೊಕ್ಕಿದೆ.
ರಂಜನ್ ಪಿರಿಯದೊರೆ ವಾರ್ತಾ ಪೇಪರ್ ನ ಪ್ರೆಸ್ ರಿಪೋರ್ಟರ್ ಹರೀಶ್ ಅವರ ಮಗನಾಗಿರುತ್ತಾನೆ. ಹಾಗೆ ಇಬ್ಬರು ಗೆಳೆಯರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
