ಹಾಸನ: ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಹಲ್ಲೆ ನಡೆಸಿದ ಸಂಬಂಧ 9 ಜನರ ವಿರುದ್ಧ FIR ದಾಖಲಾಗಿದೆ. ಹಾಸನ ತಾಲೂಕಿನ ಅಂಕನಾಯಕನಹಳ್ಳಿ ಬಳಿ ಶುಕ್ರವಾರ ನಡೆದಿದ್ದ ಘಟನೆಯಾಗಿತ್ತು.4
ಘಟನೆ ಸಂಬಂಧ ಅರಕಲಗೂಡು ಪೊಲೀಸರಿಗೆ ಹಲ್ಲೆಗೊಳಗಾದ ಸಾರಿಗೆ ಬಸ್ ನಿರ್ವಾಹಕ ಬಸವರಾಜು ದೂರು ನೀಡಿದ್ದ ಆಧಾರದ ಮೇಲೆ FIR ದಾಖಲಾಗಿದೆ.
ವನಿತಾ, ಲಕ್ಷ್ಮಿ, ಕುಮಾರ ತಿಮ್ಮೇಗೌಡ, ಶೇಖರ ಪೂಜಾರಿ, ಸಂದೀಪ, ರವಿಕುಮಾರ್, ಗಿಡ್ಡೇಗೌಡ ಸೇರಿ ಇತರರ ವಿರುದ್ಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಬಸ್ ನಿಲ್ಲಿಸಿ ಊಟಕ್ಕೆ ತೆರಳುತ್ತಿದ್ದ ಚಾಲಕ ಹಾಗೂ ನಿರ್ವಾಹಕ ಈ ವೇಳೆ ಬಸ್ ಹತ್ತಲು ಮುಂದಾದ ವಿದ್ಯಾರ್ಥಿನಿ ಊಟ ಮಾಡಿ ಬಸ್ ಹೊರಡುವುದು ತಡವಾಗಲಿದೆ ಪಕ್ಕದಲ್ಲೇ ಅರಕಲಗೂಡಿಗೆ ತೆರಳುವ ಬಸ್ ಖಾಲಿ ಇದೆ ಅದರಲ್ಲಿ ಹೋಗಿ ಎಂದು ನಿರ್ವಾಹಕ ಬಸವರಾಜು
ಇದರಿಂದ ಕೆರಳಿದ ವಿದ್ಯಾರ್ಥಿನಿ ಇದು ಸರ್ಕಾರದ ಬಸ್, ಎಷ್ಟು ಹೊತ್ತಾದರು ನಾನು ಇದೇ ಬಸ್‌ನಲ್ಲಿ ಗ್ರಾಮಕ್ಕೆ ತೆರಳುತ್ತೇನೆ ಎಂದು ಬಸ್ ಹತ್ತಿ ಕುಳಿತಿದ್ದ ವಿದ್ಯಾರ್ಥಿನಿ ಊಟ ಮುಗಿಸಿಕೊಂಡು ಬಂದ ಚಾಲಕ ಹಾಗೂ ನಿರ್ವಾಹಕ ಮೊದಲೇ ಹೊರಟ ಬಸ್‌ನಲ್ಲಿ ತೆರಳು ಎಂದರೆ ಯಾಕಿಷ್ಟು ಹಠ ಮಾಡ್ತಿಯಾ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ ಕಂಡಕ್ಟರ್ ಬಸವರಾಜು
ಇದರಿಂದ ಕೆರಳಿತಮ್ಮ ಪೋಷಕರಿಗೆ ತಿಳಿಸಿದ ವಿದ್ಯಾರ್ಥಿನಿ ಸಾರಿಗೆ ಬಸ್ ಅಂಕನಾಯಕನಹಳ್ಳಿ ಗ್ರಾಮಕ್ಕೆ ಬರುವುದರೊಳಗೆ ಜಮಾಯಸಿದ ವಿದ್ಯಾರ್ಥಿನಿ ಪೋಷಕರು ಹಾಗೂ ಗ್ರಾಮಸ್ಥರು ಕಂಡಕ್ಟರ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಪೋಷಕರು ಹಾಗೂ ಗ್ರಾಮಸ್ಥರು ಇದರಿಂದ ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದ ಕಂಡಕ್ಟರ್ ಬಸವರಾಜು.
