ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬ ದರ್ಶನೋತ್ಸವ ಅಂತ್ಯವಾಗಿದ್ದು, ಈಗಾಗಲೇ ಗರ್ಭಗುಡಿಯನ್ನು ಬಂದ್ ಮಾಡಲಾಗಿದೆ. ಇನ್ನು ಇಂದು ನಡೆದ ಹುಂಡಿ ಎಣಿಕೆ ಕಾರ್ಯ ಅಂತ್ಯವಾಗಿದ್ದು.ಈ ಬಾರಿ ದಾಖಲೆಯ ಇತಿಹಾಸ ಬರೆದಿದ್ದು, ಒಟ್ಟು 25, 59,87,327 ರೂಪಾಯಿ ಆದಾಯ ಸಿಕ್ಕಿದೆ ಎಂದು ಎಸಿ ಹಾಗೂ ಹಾಸನಾಂಬೆ ದೇಗುಲದ ಆಡಳಿತಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.
ಹಾಗೆ ವಿಶೇಷ ದರ್ಶನದ 1,000 ರೂ. ನಲ್ಲಿ ಮುನ್ನೂರು ಟಿಕೆಟ್ ಮತ್ತು ಲಾಡು ಮಾರಾಟದಿಂದ 21 ಕೋಟಿ 91 ಲಕ್ಷದ 75 ಸಾವಿರ 052 ರೂ. ಸಂಗ್ರಹವಾಗಿದೆ. ಹುಂಡಿಯಲ್ಲಿ 3 ಕೋಟಿ 68 ಲಕ್ಷದ 12 ಸಾವಿರದ 275 ರೂ., ಒಟ್ಟು 25 ಕೋಟಿ 59 ಲಕ್ಷದ 87 ಸಾವಿರದ 327 ರೂ. ಹಣ ಸಂಗ್ರಹವಾಗಿದೆ. ಇನ್ನೂ ಭಕ್ತರು, ಕಾಣಿಕೆ ರೂಪದಲ್ಲಿ 75 ಗ್ರಾಂ 300 ಮಿಲಿ ಚಿನ್ನ, ಬೆಳ್ಳಿ 1 ಕೆ.ಜಿ. 58 ಗ್ರಾಂ 400 ಮಿಲಿ ಬೆಳ್ಳಿ ವಸ್ತುಗಳನ್ನು ಹುಂಡಿಗೆ ಹಾಕಿದ್ದಾರೆ.
