Wednesday, August 5, 2026
Homeಕ್ರೈಮ್ಸಕಲೇಶಪುರ: ಪುರಸಭೆ ಮುಖ್ಯಾಧಿಕಾರಿಯ ಕಚೇರಿಗೆ ಬೆಂಕಿ ಹಚ್ಚಿ ವ್ಯಕ್ತಿ ಪರಾರಿ!

ಸಕಲೇಶಪುರ: ಪುರಸಭೆ ಮುಖ್ಯಾಧಿಕಾರಿಯ ಕಚೇರಿಗೆ ಬೆಂಕಿ ಹಚ್ಚಿ ವ್ಯಕ್ತಿ ಪರಾರಿ!

Telegram Group
Join Now

ಸಕಲೇಶಪುರ: ಪಟ್ಟಣ ಪುರಸಭೆಯ ಮುಖ್ಯಾಧಿಕಾರಿಯ ಕಚೇರಿಗೆ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.


ಶುಕ್ರವಾರ ಸಂಜೆ 4 ಗಂಟೆ ಸಮಯದಲ್ಲಿ ವ್ಯಕ್ತಿಯೊಬ್ಬ ಪುರಸಭೆಯ ಮುಖ್ಯಾಧಿಕಾರಿ ಕಛೆರಿಯಲ್ಲಿ ಯಾರು ಇಲ್ಲದ ಸಮಯ ನೋಡಿ ಕೊಠಡಿಗೆ ನುಗ್ಗಿ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ, ಕೊಠಡಿಯಿಂದ ಹೊಗೆ ಬರುತಿದ್ದನ್ನು ಕಂಡ ಸಿಬ್ಬಂದಿಗಳು ತಕ್ಷಣ ನೀರು ಹಾಕಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಯಾವುದೆ ದೊಡ್ಡ ಪ್ರಮಾದ ಆಗದಂತೆ ತಡೆದಿದ್ದಾರೆ.

ಕೆಲ ದಾಖಲೆ ಪತ್ರ ಗಳು ಸುಟ್ಟು ಕರಕಾಲಗಿದೆ. ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮದ್ಯಾಹ್ಣದಿಂಧ ಕಛೆರಿಯ ಆವರಣದಲ್ಲಿ ಮುಖ್ಯಾಧಿಖಾರಿಗಳಿಗೆ ಬೈಯುತ್ತಾ ತೀರುಗಾಡುತಿದ್ದ ಆತನೆ ಇರ ಬಹುದೆಂದು ಶಂಕಿಸಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಹಾಗೂ ಪುರಸಬೆ ಸದಸ್ಯರ ತಂಡ ತರಬೇತಿ ಪ್ರವಾಸಕ್ಕೆ ಗೋವಾಕ್ಕೆ ಹೋಗಿದ್ದು ಯಾರು ಇಲ್ಲದ ಈ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಹಲವು ಅನುಮಾನಗಳಿಗೆ ಕಾರಣ ವಾಗಿದೆ ಪೊಲಿಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದು ವ್ಯಕ್ತಿಯನ್ನು ಪತ್ತೆ ಹಚ್ಚವಲ್ಲಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments