ಹಾಸನಾಂಬ ದೇವಾಲಯದ ಪವಿತ್ರ ಪ್ರಾಂಗಣದಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ದೇವಿಯ ಸಮೀಪ ಸಾಗಲು ಇಡುವ ಹೆಜ್ಜೆ. ಹಾಗಾಗಿ ಚಪ್ಪಲಿ ಹಾಗೂ ಪಾದರಕ್ಷೆಗಳನ್ನು ಬಸ್‌ಸ್ಟ್ಯಾಂಡ್ / ಪಾರ್ಕಿಂಗ್‌ನಲ್ಲಿರುವ ನಿಗದಿತ ಸ್ಟ್ಯಾಂಡ್‌ಗಳಲ್ಲಿ ಇಡಬೇಕು. ಇದು ಕೇವಲ ನಿಯಮವಲ್ಲ — ನಮ್ಮ ದೇವಿಗೆ ಸಲ್ಲಿಸುವ ಗೌರವ ಹಾಗೂ ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ನಮ್ಮ ಸಂಪ್ರದಾಯ ಎಂದು ಹಾಸನ ಜಿಲ್ಲಾಡಳಿತದಿಂದ ಪ್ರಕಟಣೆ ಹೊರಡಿಸಲಾಗಿದೆ.
ಹೌದು ..ಹಾಸನಾಂಬ ದೇವಿ ದರ್ಶನಕ್ಕೆ ಎಲ್ಲರೂ ಬನ್ನಿ, ಸಂಪ್ರದಾಯವನ್ನು ಪಾಲಿಸಿ, ಪಾವಿತ್ರ್ಯವನ್ನು ಕಾಪಾಡಿ, ಹಾಸನಮ್ಮನ ಆಶೀರ್ವಾದವನ್ನು ನಿಜವಾದ ಭಕ್ತಿಯಿಂದ ಪಡೆಯೋಣ ಎಂದು ಜಿಲ್ಲಾಡಳಿತ ಹಾಸನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 9 ರಂದು ದೇವಾಲಯದ ಬಾಗಿಲು ತೆರೆಯಲಾಗುವುದು, 23 ರಂದು ದೇವಾಲಯದ ಬಾಗಿಲು ಮುಚ್ಚಲಾಗುವುದು ಒಟ್ಟು 13 ದಿನಗಳ ಕಾಲ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಪ್ರಸಾದ ವಿತರಣೆ, ಭಕ್ತಾದಿಗಳು ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಾಗಲು ಅನುಕೂಲವಾಗುವಂತೆ ಬ್ಯಾರಿಕೇಡ್ ವ್ಯವಸ್ಥೆಗೆ ಕ್ರಮವಹಿಸಲು ಸೂಚನೆ ನೀಡಿದೆ. ಹಾಗೆ ಜನಸಂದಣಿ ಆಗದಂತೆ ಎಚ್ಚರಿಕೆವಹಿಸಿ ಶಾಂತ ರೀತಿಯಲ್ಲಿ ನಿರ್ವಹಣೆ ಮಾಡಲು ನಿಗಾವಹಿಸಬೇಕು ಎಂದು ತಿಳಿಸಿದೆ.
ದೇವಿಯ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಜಾತ್ರಾ ಮಹೋತ್ಸವ ಮನಸ್ಸಿನಲ್ಲಿ ಉಳಿಯುವಂತೆ ಮಾಡಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜಾನಪದ ಕಲಾ ಪ್ರರ್ದಶನಕ್ಕೆ ಒತ್ತು ನೀಡುವಂತೆ ತಿಳಿಸಿದರಲ್ಲದೆ ಸ್ಥಳೀಯ ತಿಂಡಿ ತಿನಿಸ್ಸುಗಳು ಹಾಗೂ ಕರಕುಶಲ ಉತ್ಪನ್ನಗಳಿಗೆ ಮಾರಾಟ ಮಳಿಗೆಗಳನ್ನು ತೆರೆಯಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಯುವ ಜನತೆಯಲ್ಲಿರುವ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಪರ್ಧೆಗಳನ್ನ ಏರ್ಪಡಿಸಿ ಸದಾಭಿರುಚಿಯಿಂದ ಕೂಡಿರುವ ನೃತ್ಯಗಳನ್ನು ಪ್ರರ್ದಶಿಲು ಅವಕಾಶ ಕಲ್ಪಿಸಿ ಉತ್ತಮ ಪ್ರದರ್ಶನಕ್ಕೆ ಬಹುಮಾನ ನೀಡುವುದಾಗಿ
