Thursday, July 9, 2026
Homeಜಿಲ್ಲಾಸುದ್ದಿರಾಷ್ಟ್ರ ಮಟ್ಟದ ಪಂಜ ಕುಸ್ತಿಯಲ್ಲಿ ಹಾಸನ ಜಿಲ್ಲೆಗೆ ಕೀರ್ತಿ ತಂದ ಯುವತಿ!

ರಾಷ್ಟ್ರ ಮಟ್ಟದ ಪಂಜ ಕುಸ್ತಿಯಲ್ಲಿ ಹಾಸನ ಜಿಲ್ಲೆಗೆ ಕೀರ್ತಿ ತಂದ ಯುವತಿ!

Telegram Group
Join Now

ಹಾಸನ: ಪಂಜಾಬಿನ, ಲುಧಿಯಾನದಲ್ಲಿ ನಡೆದ 47ನೇ ರಾಷ್ಟ್ರ ಮಟ್ಟದ ಪಂಜ ಕುಸ್ತಿಯಲ್ಲಿ ಹಾಸನ ಜಿಲ್ಲೆಗೆ ಕೀರ್ತಿ ತಂದ ಯುವತಿ ಕುಮಾರಿ.ಚಿನ್ಮಯಿ ಎಂ.ವಿ

ಹಾಸನದ ಮಂಜು ತ್ಯಾಗಿ ಮತ್ತು ವಾಣಿ ದಂಪತಿಗಳ ಸುಪುತ್ರಿಯಾದ ಕು. ಚಿನ್ಮಯಿ ಎಂ.ವಿ. ಅವರು ಪಂಜಾಬ್‌ನ ಲುಧಿಯಾನದ ಗುರುನಾನಕ್ ದೇವ್ ಭವನದಲ್ಲಿ ಆಗಸ್ಟ್ 29 ರಿಂದ 31 ರವರೆಗೆ ಜರುಗಿದ 47ನೇ ರಾಷ್ಟ್ರೀಯ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್-2025 ನಲ್ಲಿ
ಅವರು ಯೂತ್ ಗರ್ಲ್ಸ್‌ನಿಂದ 50 ರಲ್ಲಿ ಪ್ರಥಮ ಸ್ಥಾನ ಪಡೆದು ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.

ನಮ್ಮ ಹಾಸನದವರಾದ ಕು. ಚಿನ್ಮಯಿ ಎಂ.ವಿ. ಅವರು ಬಿಎಸ್ಸಿ ಪದವೀಧರೆ ಆಗಿದ್ದು ಬಲಗೈ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಎಡಗೈ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಹಿರಿಮೆಯನ್ನು ತಂದಿದ್ದಾರೆ.

ಇವರ ಈ ಸಾಧನೆಯು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಮತ್ತಷ್ಟು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಹೆಸರು ತರಲಿ ಎಂದು ಶುಭ ಹಾರೈಸುತ್ತಾ ಸಮಸ್ತ ಹಾಸನ‌ ಜನೆತೆಯ ಪರವಾಗಿ ಅಭಿನಂದನೆಗಳು..

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments