Monday, March 30, 2026
Homeಜಿಲ್ಲಾಸುದ್ದಿಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಮಧ್ಯಾಹ್ನ ತೆರೆ: ಈ ವರ್ಷ 26 ಲಕ್ಷಕ್ಕೂ ಅಧಿಕ ಭಕ್ತರಿಂದ...

ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಮಧ್ಯಾಹ್ನ ತೆರೆ: ಈ ವರ್ಷ 26 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ!

ಹಾಸನದ ಅದಿದೇವತೆ ಹಾಸನಾಂಬೆ ತಾಯಿಯ ದರ್ಶನ ಅಂತ್ಯಗೊಂಡಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಈ ಬಾರಿ ಇತಿಹಾಸ ಬರೆದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಮಧ್ಯಾಹ್ನ ತೆರೆ ಬಿತ್ತು.  ಇನ್ನು ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ. ಈ ವರ್ಷದ 13 ದಿನದಲ್ಲಿ ದಾಖಲೆ ಪ್ರಮಾಣದ 26 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಸಚಿವ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಉತ್ತಮ ವ್ಯವಸ್ಥೆ ಆಗಿರುವ ಬಗ್ಗೆ ಜನ ಕೊಂಡಾಡಿದ್ದಾರೆ.

ಹೌದು ..ಇಂದು, ಅಕ್ಟೋಬರ್ 23ರ ಮಧ್ಯಾಹ್ನ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಕಳೆದ 13 ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದಿದ್ದು, ದೇಗುಲದ ಆದಾಯ ಕೋಟಿ ಹತ್ತಿರ ಸಮೀಪಿಸಿದೆ. ಈ ಕೆಂಡೋತ್ಸವವು ಉತ್ಸವದ ಮುಕ್ತಾಯವು ಭಕ್ತರಲ್ಲಿ ಭಕ್ತಿ-ಭಾವ ಮೆರೆದರು. ಇದರಲ್ಲಿ ಭಕ್ತರು ಮತ್ತು ಗಣ್ಯರು ಒಂದಾದರು. ಸ್ವತಃ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡರು ಜನರೊಂದಿಗೆ ಸಾಮಾನ್ಯರೊಡನೆ ಬೆರೆತರು. ಈ ಘಟನೆಯು ಹಾಸನದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ಶ್ರೀಮಂತಿಕೆಯನ್ನು ಎತ್ತಿ ತೋರಿಸಿತು, ಜೊತೆಗೆ ಜಿಲ್ಲಾಡಳಿತದ ಜನಸಾಮಾನ್ಯರೊಂದಿಗಿನ ಒಡನಾಟ ಇನ್ನಷ್ಟು ಮೆರಗು ನೀಡಿತು.

ಹಾಗೆ ಈ ವರ್ಷ ಗಣ್ಯ ವ್ಯಕ್ತಿಗಳ ಹೆಸರಲ್ಲಿ ನಡೆಯುತ್ತಿದ್ದ ದುರುಪಯೋಗಕ್ಕೆ ಕಡಿವಾಣ ಹಾಕಲಾಗಿದ್ದು, ಜನಸಾಮಾನ್ಯರು ಸುಗಮವಾಗಿ ದರ್ಶನ ಮಾಡಿದ್ದಾರೆ ಎಂದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಸಾಮಾನ್ಯ ಭಕ್ತರು ಮಾತ್ರವಲ್ಲದೇ, ಅನೇಕ ರಾಜಕೀಯ ನಾಯಕರು, ಮಠಾಧೀಶರು ಹಾಗೂ ಚಿತ್ರರಂಗದ ಗಣ್ಯರೂ ಸಹ ದೇವಿಯ ದರ್ಶನ ಪಡೆದು ಭಕ್ತಿಭಾವದಿಂದ ಜಾತ್ರೆಯಲ್ಲಿ ಪಾಲ್ಗೊಂಡರು. ಹಾಸನಾಂಬೆ ಜಾತ್ರೆಗೆ ಸ್ಥಳೀಯ ಆಡಳಿತ ಮತ್ತು ಸುರಕ್ಷತಾ ತಂಡಗಳು ಸಾಕಷ್ಟು ವ್ಯವಸ್ಥೆಗಳನ್ನು ಕೈಗೊಂಡಿದ್ದು, ಭಕ್ತರಿಗೆ ಯಾವುದೇ ಅಡಚಣೆ ಇಲ್ಲದೆ ದರ್ಶನವಾಗುವಂತೆ ಮಾಡಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಕೆಂಡ ಹಾಯ್ದು ಭಕ್ತಿ ಮೆರೆದರು. ಗರ್ಭಗುಡಿ ಬಾಗಿಲು ಬಂದ್ ಮಾಡುವುದಕ್ಕೂ ಮೊದಲು ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಿಂದ ಜರುಗಿತು. ಬಳಿಕ ಮಾತನಾಡಿದ ಡಿಸಿ, ಕಳಸ ಹೊತ್ತ ಭಕ್ತರು ಕೆಂಡ ಹಾಯ್ದಿಯ್ದು ನೋಡಿ ನನಗೂ ಇಂಗಿತ ಬಂತು, ಮೊದಲು ಭಯ ಆದರೂ ನಂತರ ಭಕ್ತಿಯಿಂದ ಕೈ ಮುಗಿದು ಹೋದೆ, ಏನೂ ಆಗಲಿಲ್ಲ ಎಂದು ಅನುಭವ ಹೇಳಿಕೊಂಡಿದ್ದಾರೆ.

ಅ.9ರಂದು ಹಾಸನಾಂಬೆ ದೇವಿ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಇಲ್ಲಿಯವರೆಗೂ 27 ಲಕ್ಷಕ್ಕಿಂತ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ. 1,000 ರೂ, 300 ರೂ, ಲಾಡು ಪ್ರಸಾದ ಹಾಗೂ ದೇವಿಯ ಸೀರೆ ಮಾರಾಟದಿಂದ ಕೋಟಿಗೂ ಅಧಿಕ ಆದಾಯ ಬಂದಿದ್ದು, ಈ ಬಾರಿಯ ಜಾತ್ರಾ ಮಹೋತ್ಸವ ಇತಿಹಾಸ ಬರೆದಿದೆ.

ಅಂದಹಾಗೆ 2026ರ ಹಾಸನಾಂಬಾ ದರ್ಶನೋತ್ಸವ ಬಗ್ಗೆಯೂ ಮಾಹಿತಿ ಇಲ್ಲಿದೆ

2026ರ ಅಕ್ಟೋಬರ್ 29, ಗುರುವಾರದಂದು ಬಾಗಿಲು ತೆರೆಯುವ ದಿನವಾಗಿದ್ದು 2026ರ ನವೆಂಬರ್ 11, ಬುಧವಾರ ವೇಳೆಗೆ ಬಾಗಿಲು ಮುಚ್ಚುವ ದಿನವಾಗಿರುತ್ತೆ ಎಂದು ತಿಳಿಸಲಾಗಿದೆ.

2026ರಲ್ಲಿ ದೇವಾಲಯದ ಬಾಗಿಲು 14 ದಿನಗಳ ಕಾಲ ತೆರೆದಿರಲಿದ್ದು, ಇದರಲ್ಲಿ 12 ದಿನಗಳ ಕಾಲ ಸಾರ್ವಜನಿಕರಿಗೆ ಹಾಸನಾಂಬೆ ತಾಯಿ ದರ್ಶನ ನೀಡಲಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!