Tuesday, August 11, 2026
Homeಜಿಲ್ಲಾಸುದ್ದಿಹಾಸನಾಂಬೆ ಉತ್ಸವದಲ್ಲಿ ಕೆಂಡ ಹಾರಿದ ಜಿಲ್ಲಾಧಿಕಾರಿ ಲತಾಕುಮಾರಿ!

ಹಾಸನಾಂಬೆ ಉತ್ಸವದಲ್ಲಿ ಕೆಂಡ ಹಾರಿದ ಜಿಲ್ಲಾಧಿಕಾರಿ ಲತಾಕುಮಾರಿ!

Telegram Group
Join Now

ಹಾಸನಾಂಬ ಉತ್ಸವದ ಸಮಾರೋಪದ ಅಂಗವಾಗಿ ನಡೆದ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವ ಗುರುವಾರ ಬೆಳಗ್ಗೆ ನಡೆಯಿತು. ಈ ಕೆಂಡೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಅವರು ನೂರಾರು ಭಕ್ತರೊಂದಿಗೆ ಕೆಂಡ ಹಾಯ್ದು ಭಕ್ತಿ ಮೆರೆದಿದ್ದು ಎಲ್ಲರ ಗಮನ ಸೆಳೆಯಿತು.

ಹೌದು .. ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದಲ್ಲಿ ಭಕ್ತರ ದರ್ಶನ ಇಂದು ಕೊನೆಯಾಗುತ್ತಿದ್ದು, ಗರ್ಭಗುಡಿ ಬಾಗಿಲು ಬಂದ್ ಮಾಡಲಾಗುತ್ತಿದೆ. ಮತ್ತೆ ಮುಂದಿನ ವರ್ಷ ಬಾಗಿಲು ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ. ಗರ್ಭಗುಡಿ ಬಾಗಿಲು ಬಂದ್ ಮಾಡುವುದಕ್ಕೂ ಮುನ್ನ ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ, ಜಿಲ್ಲಾಧಿಕಾರಿ ಲತಾ ಕುಮಾರಿ ಸಹ ಕೆಂಡ ಹಾಯ್ದು ಭಕ್ತಿ ಭಾವ ಮೆರೆದರು. 

ಶ್ರದ್ಧಾಭಕ್ತಿಯಿಂದ ಆಚರಿಸಲಾದ ಈ ಕೆಂಡೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ, ಕೆಂಡದ ಮೇಲೆ ಹಾಯ್ದು ತಮ್ಮ ಭಕ್ತಿಯನ್ನು ಮೆರೆದರು.ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪ್ರಸಿದ್ಧ ಹಾಸನಾಂಬ ದೇವಿಯ ಉತ್ಸವದ ಸಾರ್ವಜನಿಕ ದರ್ಶನ ಅಕ್ಟೋಬರ್ 22ರಂದು ಕೊನೆಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments