ಮೂಡಿಗೆರೆ: ತಾಲೂಕಿನ ಬಸ್ ಸ್ಟಾಂಡ್ ನಲ್ಲಿ ಅಪಾಯಕಾರಿಯಾಗಿ ಬಾಗಿರುವ ಮರವೊಂದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ
ಹೌದು ಪಟ್ಟಣಕ್ಕೆ ಹಳ್ಳಿ ಪ್ರದೇಶಗಳಿಂದ ಬರುವ ಬಹುತೇಕ ಜನರು ಬಸ್ ಬಳಸುವುದು ಹೆಚ್ಚು ಬಸ್ ನಿಲ್ದಾಣ ದಿಂದ ನೇರವಾಗಿ ಹೊರ ಹೋಗಬೇಕಾದರೆ ಮರದ ಸಮೀಪವೇ ಹೊರಗಡೆ ಸಾಗುವ ಗೇಟ್ ಇದ್ದು ಬದಿಯಲ್ಲಿರುವ ಈ ಬೃಹತ್ ಮರ ತತ್ಕೋಳ ಮುಖ್ಯ ರಸ್ತೆಯತ್ತ ವಾಲಿಕೊಂಡಿದ್ದು, ಬಿರುಗಾಳಿ ಅಥವಾ ಭಾರೀ ಮಳೆಯ ಸಂದರ್ಭದಲ್ಲಿ ಯಾವುದೇ ಕ್ಷಣದಲ್ಲಿ ರಸ್ತೆಯ ಮೇಲೆ ಉರುಳಿ ಬೀಳುವ ಅಪಾಯವಿದೆ ಅದಲ್ಲದೆ ರಸ್ತೆಯ ಪಕ್ಕದಲ್ಲೇ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಈ ಮರವು ಜನರ ಜೀವ ಬಲಿಗೆ ಕಾಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ
ಈ ಮಾರ್ಗವಾಗಿ ತತ್ಕೋಳ, ಕುಂದೂರು, ಸಾರಗೋಡು, ದರ್ಶನ, ಮೂಲಕ ಮಾಗುಂಡಿ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ್ದರಿಂದ, ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ ವಾಹನಗಳು, , ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ವಾಹನಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಮರ ಉರುಳಿದರೆ ಗಂಭೀರ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.
ಮಳೆಗಾಲದಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿರುವ ಘಟನೆಗಳು ಈಗಾಗಲೇ ಪಟ್ಟಣ ಹಾಗೂ ಹಳ್ಳಿಗಳಲ್ಲಿ ನಡೆದಿವೆ ಅಲ್ಲದೆ ಅಧಿಕ. ಮಳೆಯ ಸಂದರ್ಭದಲ್ಲಿ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು, ಕೂಲಿಕಾರರು ಪಕ್ಕದ ಕಟ್ಟಡಗಳ ಮುಂದೆ ನಿಂತಿರುತ್ತಾರೆ. ಮರದ ದೊಡ್ಡ ರೆಂಬೆಗಳು ಆಗಾಗ ಕೆಳಗೆ ಬಿದ್ದು ವಾಹನಗಳು ಹಲವಾರು ಬಾರಿ ಜಖಂಗೊಂಡಿವೆ ಆದರೂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಪಾಯ ಸಂಭವಿಸುವ ಮೊದಲು ಪಟ್ಟಣ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಯಾವುದೇ ಅನಾಹುತ ಸಂಭವಿಸುವ ಮುನ್ನ ಬಸ್ ಸ್ಟಾಂಡ್ ನಲ್ಲಿರುವ ಬೃಹತ್ ಮರವನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ
ವರದಿ:ಪುನೀತ್ ಕಡಿದಾಳು
9483811948
