ಮೂಡಿಗೆರೆ:ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೈಪ್ ಲೈನ್ ಅಳವಡಿಕೆ ಗಾಗಿ ತೆಗೆದ ಚರಂಡಿ ಮುಚ್ಚಿವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದೂ ಕೂಡಲೆ ಸಮರ್ಪಕವಾಗಿ ಚರಂಡಿ ಮುಚ್ಚಿಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ತಹಹಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ವಿ,ಹಿ,ಪ, ತಾಲ್ಲೂಕು ಅಧ್ಯಕ್ಷ ಸುದೇವ್ ಗೌಡ ಮಾತನಾಡಿ ಪಟ್ಟಣದಲ್ಲಿ ಪೈಪ್ ಲೈನ್ ನೆಪದಲ್ಲಿ ಮನಬಂದಂತೆ ಚರಂಡಿ ತೆಗೆದಿದ್ದು, ಸರಿಯಾಗಿ ಮುಚ್ಚದೆ ತಿಂಗಳುಗಟ್ಟಲೆ ಕಳೆದಿದೆ,ಗುಂಡಿಯಿಂದ ದ್ವಿಚಕ್ರ ವಾಹನ ಸವಾರರು ಪದೇ ಪದೇ ಬೀಳುತ್ತಿದ್ದೂ,ಮಳೆಗಾಲವಾದ್ದರಿಂದ ನೀರು ತುಂಬಿ, ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ ಅಲ್ಲದೆ ರಸ್ತೆ ಬದಿ ದಾರಿಹೋಕರಿಗೆ, ಶಾಲಾ ಮಕ್ಕಳಿಗೆ ಕೆಸರು ಹಾರುವುದು ಹಾಗೂ ಎಲ್ಲಾ ವಾಹನಗಳ ಬಿಡಿ ಭಾಗಗಳು ಪದೇ ಪದೇ ರಿಪೇರಿ ಆಗುವಂತಹ ಪರಿಸ್ಥಿತಿ ಬಂದು ಒದಗಿರುತ್ತದೆ.ಈ ಸಮಸ್ಯೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೆ ಎಚ್ಚೇತ್ತು ಸಾರ್ವಜನಿಕರಿಗೆ ಆಗುತ್ತಿರುವ ಸಮಾಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ಒತ್ತಾಯಿಸಿದರು.
ಈ ಸಮಸ್ಸೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳು ನಿರ್ಲಕ್ಷ ತೋರಿದ್ದಲ್ಲಿ ಪಟ್ಟಣ ಪಂಚಾಯಿತಿ ಕಛೇರಿಗೆ ಸಂಘಟನೆ ಮುತ್ತಿಗೆ ಹಾಕಿ ಬೀಗ ಜಡಿಯುವ ಮುಖಾಂತರ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಉಪಾಧ್ಯಕ್ಷ ಅಭಿಲಾಶ್ ಉಗ್ಗೆಹಳ್ಳಿ, ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಸಂಯೋಜಕರಾದ ಸಂತೋಷ ಶುಭನಗರ, ಕಾರ್ಯಕರ್ತರಾದ ಶಶಿ ಕಿತ್ತಲೇಗಂಡಿ , ರಾಜು, ಕಾರ್ತಿಕ್, ಧನುಷ್, ಸಾಗರ್, ಆದಿತ್ಯ, ಅವಿನಾಶ್, ಯತೀಶ್, ಜೀವನ್, ಮಣಿ,ಮತ್ತಿತರರು ಇದ್ದರು
ವರದಿ -ಪುನೀತ್ ಕಡಿದಾಳು
9483811948
6361769518
