Saturday, July 18, 2026
Homeಜಿಲ್ಲಾಸುದ್ದಿIran Israel War: ದುಬೈಗೆ ಹೋಗಿರುವ ಕಾಫಿನಾಡಿನ ಜನರಿಗೆ ಜಿಲ್ಲಾಡಳಿತದಿಂದ ಸಹಾಯವಾಣಿ ನಂಬರ್‌ ಬಿಡುಗಡೆ!

Iran Israel War: ದುಬೈಗೆ ಹೋಗಿರುವ ಕಾಫಿನಾಡಿನ ಜನರಿಗೆ ಜಿಲ್ಲಾಡಳಿತದಿಂದ ಸಹಾಯವಾಣಿ ನಂಬರ್‌ ಬಿಡುಗಡೆ!

Telegram Group
Join Now

ಇರಾನ್- ಇಸ್ರೇಲ್ ಯುದ್ಧದಿಂದಾಗಿ ಮಧ್ಯ ಪ್ರಾಚ್ಯದಲ್ಲಿ ಸಿಲುಕಿರೋ ಕರ್ನಾಟಕದವರ ರಕ್ಷಣೆಗೆ ಕರ್ನಾಟಕ ಸರ್ಕಾರ ಕ್ರಮವಹಿಸಿದೆ. ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದವರು, ಉದ್ಯೋಗ ಸಂಬಂಧ ಕೆಲಸಗಳಿಗಾಗಿ ದುಬೈಗೆ ಹೋಗಿರುವ ಕನ್ನಡಿಗರು ಸ್ವದೇಶಕ್ಕೆ ಹಿಂತಿರುಗಲಾರದೆ ಪರದಾಟ ನಡೆಸುತ್ತಿದ್ದಾರೆ.

ಫ್ಯಾಮಿಲಿ ಜೊತೆ ದುಬೈ ಪ್ರವಾಸಕ್ಕೆ ಹೋಗಿದ್ದ ಚಿಕ್ಕಮಗಳೂರಿನ‌ ಮಯೂರ ಹೋಟೆಲ್ ಮಾಲೀಕ ಗಿರೀಶ್ ಮತ್ತು ಕುಣಿಗಲ್​​ನಲ್ಲಿ ವಾಸವಿರೋ ಅವರ ಸಹೋದರ ಹರೀಶ್ ಭಟ್ ಕುಟುಂಬಗಳು ದುಬೈನಲ್ಲಿ ಸಿಲುಕಿವೆ. ಅಲ್ಲಿಂದ ಭಾರತಕ್ಕೆ ಹಿಂದಿರುಗಲು ಮಾರ್ಚ್​​ 3ಕ್ಕೆ ಫ್ಲೈಟ್​​ ಬುಕ್​​ ಆಗಿತ್ತು. ಈ ನಡುವೆ ಯುದ್ಧ ಆರಂಭವಾಗಿರುವ ಕಾರಣ ಎರಡೂ ಕುಟುಂಬಗಳ ಒಟ್ಟು 9 ಜನ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. 

ಇದರ ಮಧ್ಯ ಯುದ್ಧ ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಜಿಲ್ಲಾವಾರು ಸಹಾಯವಾಣಿ ನಂಬರ್‌ಗಳನ್ನು ನೀಡಲಾಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಅನೇಕ ಕನ್ನಡಿಗರು ಸಿಲುಕಿರುವ ಹಿನ್ನೆಲೆ ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ಆರಂಭಿಸಿದೆ. 080-22340676 ಅಥವಾ 22253707ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.ಇರಾನ್ ನಲ್ಲಿರುವ ಶಿವಮೊಗ್ಗ ಜಿಲ್ಲೆ ಜನರ ರಕ್ಷಣೆ ಹಾಗೂ ಮಾಹಿತಿ ವಿನಿಮಯಕ್ಕಾಗಿ 08182-221010, 08182-1077 ನಂಬರ್​ಗಳನ್ನ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯವರು ಸಹಾಯವಾಣಿ ಸಂಖ್ಯೆ 08262-238950 ಸಂಖ್ಯೆಗೆ ತುರ್ತು ಕರೆ ಮಾಡಬಹುದಾಗಿದೆ.

ಹಾಗೆ ಸಂಕಷ್ಟದಲ್ಲಿರುವ ಕನ್ನಡಿಗರ ಸಹಾಯಕ್ಕಾಗಿ ಇಸ್ರೇಲ್‌ +972547520711, ಇರಾನ್‌ +98912810915, ಯುಎಇ 80046342 ಮತ್ತು ಸೌಧಿ ಅರೇಬಿಯಾಂತಹ ದೇಶಗಳಲ್ಲಿ ಭಾರತೀಯ ರಾಉಭಾರಿ ಕಚೇರಿಗಳಲ್ಲಿ ಹೆಲ್ಪ್‌ ಲೈ ನ್‌ ಗಳನ್ನು ಸಂಪರ್ಕಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments