Tuesday, May 12, 2026
Homeಜಿಲ್ಲಾಸುದ್ದಿವಿಶ್ವದ ಅತಿ ಶ್ರೇಷ್ಠ ನಾಯಕ ಅಂಬೇಡ್ಕರ್ ರವರನ್ನು ಜಾತಿಯ ಅಥವಾ ಧರ್ಮದ ಯಾವುದೋ ಸ್ವಾರ್ಥಕ್ಕಾಗಿ ನೋಡುವುದು...

ವಿಶ್ವದ ಅತಿ ಶ್ರೇಷ್ಠ ನಾಯಕ ಅಂಬೇಡ್ಕರ್ ರವರನ್ನು ಜಾತಿಯ ಅಥವಾ ಧರ್ಮದ ಯಾವುದೋ ಸ್ವಾರ್ಥಕ್ಕಾಗಿ ನೋಡುವುದು ಸರಿ ಅಲ್ಲ: ಗಂಗಾಧರ ಬಹುಜನ

ಬಕ್ಕಿಗ್ರಾಮದಲ್ಲಿ ನಡೆದ ಅಂಬೇಡ್ಕರ್ ರವರ 135ನೇ ಜನ್ಮ ದಿನದ ‘ಭೀಮ ಸಂಭ್ರಮ 2026’ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಿದ ಗಂಗಾಧರ್ ಬಹುಜನ ರವರು… ವಿಶ್ವದ ಅತಿ ಶ್ರೇಷ್ಠ ನಾಯಕ ಅಂಬೇಡ್ಕರ್ ರವರನ್ನು ಜಾತಿಯ ಅಥವಾ ಧರ್ಮದ ಯಾವುದೋ ಸ್ವಾರ್ಥಕ್ಕಾಗಿ ನೋಡುವುದು ಸರಿ ಅಲ್ಲ ದೇಶದ ಎಲ್ಲ ಜಾತಿಯ ಬಡವರಿಗೆ ಮಹಿಳೆಯರಿಗೆ ಒಂದೊಳ್ಳೆ ಬದುಕನ್ನ ರೂಪಿಸಲು ತಮ್ಮ ಜೀವವನ್ನೇ ಸವೆಸಿದ್ದಾರೆ ಇದನ್ನ ದೇಶದ ಯಾವುದೇ ಜಾತಿ ಇರಲಿ ಧರ್ಮವೇ ಇರಲಿ ಮರೆಯಬಾರದು, ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಎಲ್ಲ ಬಹುಜನರ ಮೇಲೆ ಇದೆ ಆದರೆ ಜನರನ್ನ ದಿಕ್ಕು ತಪ್ಪಿಸುವ ಗುಲಾಮರ ಸಂತತಿ ಹೆಚ್ಚು ಇರುವುದರಿಂದ ಜನರೇ ಎಚ್ಚರಿಕೆಯಿಂದ ಇರಬೇಕು ಮತ್ತು ಪ್ರಶ್ನಿಸುವ ಮಾತಾಡುವ ಗುಣಗಳನ್ನು ಬೆಳಸಿಕೊಳ್ಳಬೇಕು ಎಲ್ಲರು ಎಂದರು.ಮಾಜಿ ಸಚಿವೆ ಮೋಟಮ್ಮ ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರ್ ಜಯಂತಿಗಳು ಮಲೆನಾಡಿನಲ್ಲಿ ಸುಗ್ಗಿ ಹಬ್ಬಗಳು ಹೇಗೆ ಆಗುತ್ತಿದೆಯೋ ಹಾಗೆ ಇದು ಕೂಡ ಹಬ್ಬವಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಬಿ ಬಿ ನಿಂಗಯ್ಯ, ಹಾಗೂ ಎಂ ಪಿ ಕುಮಾರಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮತ್ತು ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮಿತ್ರ ಕುಮಾರ್ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಬಿ ಎಸ್ ಜಯರಾಮ್ ಗೌಡ್ರು, ಅನುಕುಮಾರ್ ಪಿ, ಜಾಕೀರ್ ಹುಸೇನ್, ತ್ರಿಪುರ ಸುಬ್ರಮಣ್ಯ, ಶಂಕರ್ ಬೆಟ್ಟಗೆರೆ , ರಘು ಪಟ್ಟದೂರು, ರಮೇಶ್ ಎಲ್ ಬಿ, ಮಂಜುನಾಥ್ ಪಿಕೆ, ಸಿದ್ದೇಶ್, ಚಂದ್ರಶೇಖರ್ , ಸಾವಿತ್ರಿ ಎಂ ಬಿ, ಲೋಕೇಶ್ ಬಿಕೆ, ರವಿ ಬಿಜೆ , ದೇವರಾಜ್, ಕುಮಾರ್, ಆದರ್ಶ, ಅವಿನ್ , ಸಂಪತ್, ಸುಮಾವತಿ, ಸುಬ್ರಮಣ್ಯ , ನಾಗೇಶ್, ಆನಂದ್ ರವೀಂದ್ರ, ಸಾತ್ವಿಕ್ , ಅಭಿ ,ಸಚಿನ್, ನಯನ , ಮಹೇಶ್, ಪ್ರಕಾಶ್, ರಮೇಶ್ , ಸತೀಶ್ ನಂದಿತ್ , ಅಜಯ್,ಪ್ರಜ್ವಲ್, ಗೋಪಾಲ, ಮೇಘನ್ , ನಿಶಾಂತ್ ಮುಂತಾದವರು ಇದ್ದರು


ಕಾರ್ಯಕ್ರವನ್ನು ಜಯಪಾಲ್ ನಿರೂಪಿಸಿದರು, ರವೀಂದ್ರ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!