ಜಯಪುರ: ಕೊಪ್ಪ ತಾಲೂಕಿನ ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲಗೇಶ್ವರದಿಂದ ಜಯಪುರ ಸಂಪರ್ಕಿಸುವ ರಸ್ತೆ ಬಹಳ ವರ್ಷಗಳಿಂದ ಹದಗೆಟ್ಟು ದೊಡ್ಡ ದೊಡ್ಡ ಗುಂಡಿಗಳಾಗಿ ವಾಹನ ಸವಾರರಿಗೆ ಬಹಳ ಸಮಸ್ಯೆಗಳಾಗಿತ್ತು.

ಇದರಿಂದ ಬೇಸತ್ತಿದ್ದ ಗ್ರಾಮಸ್ಥರು ಸೇರಿ ಅಲಗೇಶ್ವರ ಎಸ್ಟೇಟ್ ಹಾಗೂ ಜಯಪುರ ಗ್ರಾಮ ಪಂಚಾಯತಿ ಸಹಕಾರದಿಂದ ಜೆಸಿಬಿ ಟ್ರಾಕ್ಟರ್ ಬಳಸಿ ಮಣ್ಣು ತಂದು ಗ್ರಾಮಸ್ಥರೆಲ್ಲ ಸೇರಿ ಗುಂಡಿಗಳನ್ನು ಮುಚ್ಚಿದ್ದಾರೆ.
ಸದ್ಯಕ್ಕೆ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚಿದ್ದು, ಮುಂದಿನ ವರ್ಷ ಮಳೆಗಾಲದಲ್ಲಿ ಮತ್ತೆ ಇದೇ ಸಮಸ್ಯೆ ಎದುರಾಗಲಿದ್ದು ಸಂಬಂಧ ಪಟ್ಟವರು ಗ್ರಾಮದ ರಸ್ತೆಯ ಸಮಸ್ಯೆಗಳನ್ನು ಅರಿತು ರಸ್ತೆ ನಿರ್ಮಾಣ ಮಾಡಿ ಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
