Monday, February 9, 2026
Homeಜಿಲ್ಲಾಸುದ್ದಿಕಡಿದಾಳು: ಗುಂಡಿಗಳ ಊರು: ಈ ಗ್ರಾಮದಲ್ಲಿ ವಿಶೇಷ ಸೂಚನ ಫಲಕ ಇಟ್ಟು ಪ್ರತಿಭಟನೆ!

ಕಡಿದಾಳು: ಗುಂಡಿಗಳ ಊರು: ಈ ಗ್ರಾಮದಲ್ಲಿ ವಿಶೇಷ ಸೂಚನ ಫಲಕ ಇಟ್ಟು ಪ್ರತಿಭಟನೆ!

ಮೂಡಿಗೆರೆ: ತಾಲೂಕಿನಲ್ಲಿ ಮುಂಗಾರು ಮಳೆ ಆರಂಭಕ್ಕೆ ಮುನ್ನವೇ ರಸ್ತೆಗಳಲ್ಲಿ ಗುಂಡಿಗಳು ಬಾಯ್ದೆರೆದಿದ್ದು, ವಾಹನ ಸವಾರರ ಜೀವಕ್ಕೆ ಕಂಟಕವಾಗಿವೆ. ಎಲ್ಲ ರಸ್ತೆಗಳೂ ಹೊಂಡ, ಗುಂಡಿಗಳು ಕೆರೆಯಂತಾಗಿದೆ. ಶಾಸಕರೇ ಎಲ್ಲಿದ್ದೀರಾ ಒಮ್ಮೆ ಇಲ್ಲಿ ನೋಡಿ. ವೋಟು ಕೇಳುವಾಗ ಇರುವ ಜನರ ನೆನಪು ಆಮೇಲೆ ಏನಾಗ್ತಿದೆ ಅಂತಾ ಗೊತ್ತಾ ಒಮ್ಮೆ ಇತ್ತ ಗಮನಹರಿಸಿ.

ಹೌದು .. ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಹೊಂಡಗುಂಡಿಗಳಿಂದಲೇ ಕೂಡಿದ್ದು ಜನರು ದಿನಾ ಓಡಾಡಲು ಕಷ್ಟ ಪಡುತ್ತಿದ್ದಾರೆ. ಅಲ್ಲಿರುವ ಶಾಲಾ ಮಕ್ಕಳಿಗಂತೂ ಯಾಕಾದ್ರೂ ಶಾಲೆಗಳು ಇದೆ ಇಂಥಹ ದಾರಿಯಲ್ಲಿ ಹೋಗಬೇಕೆ ಎಂದೆನಿಸಿದೆ ಆ ರೀತಿ ಆಗಿದ್ದು ದಿನಾ ಬೆಳಗಾದರೆ ಸಾರ್ವಜನಿಕರು ಹಿಡಿಶಾಪ ಹಾಕುವಂತ ಪರಿಸ್ಥಿತಿ ಉಂಟಾಗಿದೆ.

ಹೀಗಾಗಿ ಅಲ್ಲಿನ ಗ್ರಾಮಸ್ಥರು ದಾರಿಯಲ್ಲಿ ಹೋಗುವಾಗ ಇಲ್ಲಿ ಗುಂಡಿಗಳಿದ್ದು ನಿಧಾನಸಾಗಿರಿ ಇಲ್ಲದಿದ್ದರೆ ವೋಟು ಬೇಡಿದವರ ಹೊಂಡಗುಂಡಿಗಳಿವೆ ಎಂದು ಸೂಚನಾ ಫಲಕ ಹಾಕಿದ್ದನ್ನ ಕಾಣಬಹುದು. ಇದನ್ನ ಅಲ್ಲಿನ ಗ್ರಾಮಸ್ಥರೇ ಹಾಕಿಕೊಂಡಿದ್ದು ಇದು ರಸ್ತೆಗಳ ದುಃಸ್ಥಿತಿ ಸರ್ಕಾರದ ಗಮನಕ್ಕೆ ತರಲಾಯಿತು. ಈ ಬೋರ್ಡ್‌ ನ್ನ ಹಾಕಿ ಗ್ರಾಮಸ್ಥರ ದಿನನಿತ್ಯದ ಸಂಕಷ್ಟಗಳನ್ನ ಸರ್ಕಾರಕ್ಕೆ ತೋರಿಸಲು ಪ್ರತ್ನಿಸಲಾಯಿತು.

ಜನರಿಗೆ ತೊಂದರೆ ಉಂಟುಮಾಡುತ್ತಿರುವ ಇಂತಹ ಹಾಳಾದ ರಸ್ತೆಗಳು ಸರ್ಕಾರದ ನಿರ್ಲಕ್ಷ್ಯದ ನೇರ ಸಾಕ್ಷಿಯಾಗಿದ್ದು ರಾಜ್ಯವನ್ನು ಗುಂಡಿಗಳ ಊರುಗಳಾನ್ನಾಗಿಸಿದ ಕಾಂಗ್ರೆಸ್‌ ಸರ್ಕಾರ ಹಾಗೂ ಅಲ್ಲಿನ ಸ್ಥಳೀಯ ಶಾಸಕಿ ಇದನ್ನ ಜವಾಬ್ದಾರಿ ಹೊತ್ತು ಕೂಡಲೇ ಇದನ್ನ ಸರಿಪಡಿಸಬೇಕು.

ಒಂದು ಕಡೆ ಕಾಡಾನೆಗಳ ಉಪಟಳದಿಂದ ಜನ ಬೇಸತ್ತಿದ್ದಾರೆ ಹಾಗೆ ಇನ್ನೊಂದು ಕಡೆ ರಸ್ತೆಯಲ್ಲಾ ಗುಂಡಿಮಯವಾಗಿದ್ದು ದಿನನಿತ್ಯ ಓಡಾಡಲೂ ಸಂಕಷ್ಟ ಪಡುತ್ತಿದ್ದಾರೆ. ಎಲ್ಲಿದ್ದೀರಾ ನಯನಾ ಮೋಟಮ್ಮವನರೇ ಬೇಗ ಎಚ್ಚೆತ್ತುಕೊಂಡು ಅಲ್ಲಿನ ಗ್ರಾಮಸ್ಥರಿಗೆ ಮುಕ್ತಿ ಕೊಡಿಸಿ ಎಂದು ಪಬ್ಲಿಕ್‌ ಇಂಪ್ಯಾಕ್ಟ್‌ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.

ವರದಿ :ಪುನೀತ್ ಕಡಿದಾಳ್ 
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!