ಚಿಕ್ಕಮಗಳೂರು: ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಬಳಿ ನಡೆದಿದೆ. ಮೂರ್ತಣ್ಣ, ಮಂಜಣ್ಣ ಚಿರತೆ ದಾಳಿಗೆ ಒಳಗಾದ ವ್ಯಕ್ತಿ.
ಹಳ್ಳಿಯಿಂದ ಸಖರಾಯಪಟ್ಟಣ ಪಟ್ಟಣಕ್ಕೆ ಬರುವಾಗ ಮಾರ್ಗ ಮಧ್ಯೆ ಚಿರತೆಯೊಂದು ಇಬ್ಬರ ಮೇಲೆ ದಾಳಿ ಮಾಡಿದೆ. ಪರಿಣಾಮ ಮೂರ್ತಣ್ಣ ಎಂಬುವರ ಎಡಗೈನ ಒಂದು ಬೆರಳು ಚಿರತೆ ತಿಂದಿದೆ.
ಇದರಿಂದಾಗಿ ಎಮ್ಮೆದೊಡ್ಡಿಯಲ್ಲಿ ಮನೆಯಿಂದ ಹೊರಬರೋದಕ್ಕೂ ಜನಸಾಮಾನ್ಯರು ಭಯಪಡುವಂತಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಹಿಡಿಯಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.