Wednesday, March 25, 2026
Homeಜಿಲ್ಲಾಸುದ್ದಿಕಡೂರು: ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬೈಕ್ ಅಪಘಾತದಲ್ಲಿ ಸಾವು!

ಕಡೂರು: ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬೈಕ್ ಅಪಘಾತದಲ್ಲಿ ಸಾವು!

ಚಿಕ್ಕಮಗಳೂರು: ಬೈಕ್‌ʼಗೆ ಲಾರಿ ಡಿಕ್ಕಿಯಾಗಿ ಕಬಡ್ಡಿ ಆಟಗಾರ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ.

ಹೌದು .. ಅಪಘಾತದಲ್ಲಿ ಕಬಡ್ಡಿ ಆಟಗಾರ ಅಜ್ಜಂಪುರ ಸಂಪತ್ (26) ಮೃತನಾಗಿರುತ್ತಾನೆ. ಬೈಕಿನಲ್ಲಿ ಹೋಗುತ್ತಿರುವಾಗ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.‌

ರಾಜ್ಯ ಮಟ್ಟದ ಕಬಡ್ಡಿ ಆಟಗಾರನಾಗಿದ್ದ ಸಂಪತ್ ಅಪಾರ ಸಂಖ್ಯೆಯಲ್ಲಿ ಸ್ನೇಹಿತರನ್ನ ಸಹ ಹೊಂದಿದ್ದನು ಹೀಗಾಗಿ ಸಾವಿನಿಂದ ಕುಟುಂಬಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ.

ಪ್ರಕರಣ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!