Saturday, February 7, 2026
Homeಕ್ರೈಮ್ಕಡೂರು: ಬೈಕ್‌ ಅಡ್ಡಗಟ್ಟಿ ಚಿನ್ನದ ಸರ ಅಪಹರಿಸಿದ್ದ ಮೂವರು ಸುಲಿಗೆಕೋರರ ಬಂಧನ

ಕಡೂರು: ಬೈಕ್‌ ಅಡ್ಡಗಟ್ಟಿ ಚಿನ್ನದ ಸರ ಅಪಹರಿಸಿದ್ದ ಮೂವರು ಸುಲಿಗೆಕೋರರ ಬಂಧನ

ಕಡೂರು: ಬೀರೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಉಳ್ಳಿನಾಗೂರು ಎಂಬಲ್ಲಿ ತೋಟಕ್ಕೆ ತೆರಳುತ್ತಿದ್ದ ಗೋವಿಂದನಾಯ್ಕ ಎಂಬ ಕಾರ್ಮಿಕನನ್ನು ಅಡ್ಡಗಟ್ಟಿ ಚಾಕು ಮತ್ತು ರಾಡ್‌ನಿಂದ ಹಲ್ಲೆ ನಡೆಸಿ ಚಿನ್ನದ ಸರ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ತುಂಗಾ ನಗರದ ಮೊಹಮದ್‌ ತಬರಕ್‌ ಉಲ್ಲ, ಮಹಮದ್‌ ರಿಯಾಜ್‌, ಮೊಹಮದ್‌ ಮುಬಾರಕ್‌ ಎಂಬುವರನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಬೈಕ್‌ ಹಾಗೂ 7.8 ಗ್ರಾಂನ ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.  ಅಪರಾಧ ಕೃತ್ಯಕ್ಕೆ ಬಳಸುವ ಸಂಬಂಧ ಕೆ.ಚಟ್ಟನಹಳ್ಳಿ ಬಳಿ ಬೈಕ್ ಕಳವು ಮಾಡಿದ್ದ ಆರೋಪಿಗಳು, ಭದ್ರಾವತಿ ಬಸ್‌ ನಿಲ್ದಾಣದ ಸಮೀಪ ಇರುವ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಬೀರೂರು ಸಿಪಿಐ ಎಸ್‌.ಎನ್.ಶ್ರೀಕಾಂತ್‌ ನೇತೃತ್ವದಲ್ಲಿ ಪಿಎಸ್‌ಐಗಳಾದ ಡಿ.ವಿ.ತಿಪ್ಪೇಶ್‌, ಗಣಪತಿ ಶೇರುಗಾರ್‌, ಅಪರಾಧ ವಿಭಾಗದ ಸಿಬ್ಬಂದಿ ಡಿ.ವಿ.ಹೇಮಂತ್‌ಕುಮಾರ್‌, ಬಿ.ಪಿ.ಕೃಷ್ಣಮೂರ್ತಿ, ಬಿ.ಎಚ್‌.ರಾಜಪ್ಪ, ಪಾಂಡುರಂಗ, ಶಿವಾನಂದ, ಶಿವಕುಮಾರ್‌, ಮಂಜಾನಾಯ್ಕ ಪಾಲ್ಗೊಂಡಿದ್ದರು. ಆರೋಪಿಗಳನ್ನು ಪತ್ತೆಮಾಡಿರುವ ತಂಡಕ್ಕೆ ಎಸ್‌.ಪಿ ವಿಕ್ರಂ ಅಮಟೆ ಬಹುಮಾನ ಘೋಷಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!