Wednesday, March 25, 2026
Homeಕ್ರೈಮ್ಕಳಸ: ಪ್ರವಾಸಿಗರನ್ನು ಕರೆತಂದಿದ್ದ ಚಾಲಕ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವು!

ಕಳಸ: ಪ್ರವಾಸಿಗರನ್ನು ಕರೆತಂದಿದ್ದ ಚಾಲಕ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವು!

ಕಳಸ: ತಾಲೂಕಿನ ಸಂಸೆ ಸಮೀಪದ ಬಾಲಲ್ ಕಟ್ಟಿರುಕಲ್ ಬಳಿ ಪ್ರವಾಸಿಗರನ್ನು ಕರೆತಂದಿದ್ದ ಚಾಲಕ ಸ್ನಾನಕ್ಕೆ ನೀರಿಗೆ ಇಳಿದಿದ್ದ ವೇಳೆ ಕಾಲು ಜಾರಿ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಪುಟ್ಟಮಾದಯ್ಯ (53) ಮೃತಪಟ್ಟ ದುರ್ದೈವಿ.

ಸೋಮಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದ ವೇಳೆ ಕಾಲು ಜಾರಿ ಬಿದ್ದ ಪುಟ್ಟಮಾದಯ್ಯರನ್ನು ಗಮನಿಸಿದ ಸ್ಥಳೀಯರು ಹಾಗೂ ಅಲ್ಲಿದ್ದ ಮೆಸ್ಕಾಂ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಕ್ಕೆ ದಾವಿಸಿ, ಅವರನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದರು. ಆದರೆ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ಮೃತ ಪುಟ್ಟಮಾದಯ್ಯರು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಜೋಗಮಾನಸಹಳ್ಳಿ ಮೂಲದವರಾಗಿದ್ದು, ಕಳಸ-ಕುದುರೆಮುಖ ಸುತ್ತಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!