ಚಿಕ್ಕಮಗಳೂರು: ಗೋವುಗಳನ್ನು ಕದ್ದು ಸಾಗಿಸುತ್ತಿದ್ದ ಐವರು ಆರೋಪಿಗಳನ್ನ ಕಳಸ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಭದ್ರಾವತಿಯ ಹೊಳೆ ನೇರಳೆಕೆರೆಯ ಸಲ್ಮಾನ್, ಭದ್ರಾವತಿಯ ಸೀಗೇಬಾಗಿಯ ಸಾಹಿಲ್, ಶಿವಮೊಗ್ಗ ನಗರ ತಿಪಲಾಪುರ ಕ್ಯಾಂಪ್‌ನ ಸಯ್ಯದ್ ತೌಫಿಕ್, ಭದ್ರಾವತಿಯ ಕಾಗೆಕೊಡಮಗ್ಲೆ ನಿವಾಸಿ ಅಬ್ದುಲ್ ಅಜೀಜ್ ಹಾಗೂ ಭದ್ರಾವತಿಯ ಅರಳಿಹಳ್ಳಿಯ ಅಬ್ದುಲ್ ಜಾವಾದ್ ಬಂಧಿತ ಆರೋಪಿಗಳಾಗಿದ್ದು ಅವರರಿಂದ ಗೋವು ಕಳ್ಳತನಕ್ಕೆ ಬಳಸಲಾಗಿದ್ದ ಮಹೀಂದ್ರ ಝೈಲೋ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ತಿಳಿಸಿದ್ದಾರೆ.
ಆರೋಪಿಗಳು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದನಕಳ್ಳತನ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಆಗಸ್ಟ್ ೧೦ ರಂದು ರಾತ್ರಿ ಕಳಸ ಪೊಲೀಸ್ ಠಾಣೆಯ ಬಲಿಗೆ ಚೆಕ್ ಪೋಸ್ಟ್ ಬಳಿ ಝೈಲೋ ಕಾರಿನಲ್ಲಿ ನಾಲ್ಕು ದನಗಳನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಳಸ ಪಿಎಸ್‌ಐ ಚಂದ್ರ ಶೇಖರ್ ಮತ್ತು ಸಿಬ್ಬಂಧಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಎಸ್ಪಿ ತಿಳಿಸಿದಾರೆ.
