Friday, July 10, 2026
Homeಜಿಲ್ಲಾಸುದ್ದಿCattle thieves: ಸಿನಿಮೀಯ ರೀತಿಯಲ್ಲಿ ದನಗಳ್ಳರ ಕಾರನ್ನ ಚೇಸ್ ಮಾಡಿ ಹಸುಗಳನ್ನ ರಕ್ಷಿಸಿದ ಕಳಸ ಪೊಲೀಸರು!

Cattle thieves: ಸಿನಿಮೀಯ ರೀತಿಯಲ್ಲಿ ದನಗಳ್ಳರ ಕಾರನ್ನ ಚೇಸ್ ಮಾಡಿ ಹಸುಗಳನ್ನ ರಕ್ಷಿಸಿದ ಕಳಸ ಪೊಲೀಸರು!

Telegram Group
Join Now

ಚಿಕ್ಕಮಗಳೂರು : ಜಿಲ್ಲೆಯ ಕಳಸ ತಾಲೂಕಿನಲ್ಲಿ ಕಳಸ ಪೊಲೀಸರು ಸಿನಿಮೀಯ ರೀತಿಯಲ್ಲಿ ದನಗಳ್ಳರ ಕಾರನ್ನ ಚೇಸ್ ಮಾಡಿ ಹಸುಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು .. ಕಳಸದಿಂದ ಹೊರನಾಡು ಮಾರ್ಗದಲ್ಲಿ ದನಗಳ್ಳರು ಕಾರಿನಲ್ಲಿ ಹೊತ್ತೊಯ್ಯುತ್ತಿದ್ದರು. ಈ ಖಚಿತ ಮಾಹಿತಿ ಮೇರೆಗೆ ಕಳಸ ಪೊಲೀಸರು ಕಾರನ್ನು ಬೆನ್ನಟ್ಟಿದ್ದಾರೆ. ಪೊಲೀಸರು ಬೆನ್ನಟ್ಟಿರುವುದನ್ನು ಕಂಡು ಹೆದರಿ ಕಳ್ಳರು ಸಿಕ್ಕಿಬೀಳುವ ಭೀತಿಯಿಂದ ಕಾರನ್ನಯ ರಸ್ತೆಯ ಪಕ್ಕದ ತೋಟಕ್ಕೆ ನುಗ್ಗಿಸಿದ್ದಾರೆ. ಬಳಿಕ ಅಲ್ಲಿಂದ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಇನ್ನೋವಾ ಕಾರನ್ನು ವಶಕ್ಕೆ ಪಡೆದು ಹಸುಗಳ ರಕ್ಷಣೆ ಮಾಡಿದ್ದಾರೆ. ಸದ್ಯ ರಕ್ಷಿಸಿದ ಹಸುವನ್ನು ಕಳಸ ಪೊಲೀಸ್‌ ಠಾಣೆಯ ಆವರಣದಲ್ಲೇ ಕಟ್ಟಿ ಹಾಕಲಾಗಿದೆ.

ಘಟನೆ ಸಂಬಂಧ ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾದ ದನಗಳ್ಳರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments