ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಡವಟ್ಟಿಗೆ
ಸವಾರರು ಕಂಗಾಲು..!
ರಾಷ್ಟ್ರೀಯ ಹೆದ್ದಾರಿ ಅಳವಡಿಸಿರುವ ಫಲಕಗಳನ್ನು ನಂಬಿ ದೂರದ ಊರಿಗೆ ಪ್ರಯಾಣಿಸುವ ಮುನ್ನ ಒಂದೆರಡು ಬಾರಿ ಬೇರೆ ಮೂಲಗಳಿಂದ ಕಿ.ಲೋ ಮೀಟರ್‌ಗಳನ್ನು ಪರೀಕ್ಷಿಸಿಕೊಳ್ಳಿ. ರಾಷ್ಟ್ರೀಯ ಹೆದ್ದಾರಿ ಫಲಕಗಳಲ್ಲಿ ಕಿ.ಲೋ ಮೀಟರ್‌ಗಳನ್ನು ಬೇಕಾಬಿಟ್ಟಿ ಹಾಕಿ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ತಾಲೂಕಿನ ಅನೇಕ ಕಡೆಗಳ ಫಲಕಗಳಲ್ಲಿ ಎಡವಟ್ಟು ಮಾಡಲಾಗಿದೆ. ಕಡೂರಿನಿಂದ ಬೆಂಗಳೂರಿಗೆ ನಿಖರವಾಗಿ (242.2 km) ಇದ್ದು ರಾಷ್ಟ್ರೀಯ ಹೆದ್ದಾರಿ ಅಳವಡಿಸಿರುವ ಫಲಕಗಳಲ್ಲಿ 992 ಕಿ.ಮೀ. ಹಾಗೂ ಕಡೂರಿನಿಂದ to ಬೇಲೂರು 38 km ಇದ್ದು ಹೆದ್ದಾರಿ ಬೋರ್ಡ್ ಗಳಲ್ಲಿ 105 ಕಿ.ಮೀ ಎಂದು ಸೂಚಿಸಲಾಗಿದೆ. ಇದು ಇಷ್ಟೆ ಅಲ್ಲದೇ ಅನೇಕ ಕಡೆಗಳ ಸೂಚನ ಫಲಕಗಳಲ್ಲಿ ತಪ್ಪಾಗಿ ಕಿ.ಲೋ ಮೀಟರ್‌ಗಳನ್ನು ತೋರಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿತನಕ್ಕೆ ಸವಾರರು, ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ
– ̲ಕಾವ್ಯಶ್ರೀ ಕಲ್ಮನೆ