ಕೊಪ್ಪ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮೆಣಸಿನಹಾಡ್ಯದ ಬಳಿ ಗಂಧ ಕಡಿಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಕೆರೆಕಟ್ಟೆ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ನಾಲ್ಕು ಜನ ಕಳ್ಳರನ್ನು ಮೆಣಸಿನಹಾಡ್ಯ ಗ್ರಾಮಸ್ಥರ ನೆರವಿನಿಂದ ಬಂಧಿಸಿದ್ದು ಓರ್ವ ಪರಾರಿಯಾಗಿರುತ್ತಾನೆ.

ಬಂಧಿತರನ್ನು ಕಳಸ ಮೂಲದ ಹಂದಿಹಡ್ಲುವಿನ ರಘು, ಸಂಜಿತ್ ಹಾಗೂ ಕೆಳಗೂರಿನ ವಿಶ್ವನಾಥ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ. ಉಮೇಶ್ ಎಂಬಾತನು ಪರಾರಿಯಾಗಿದ್ದು ಈತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಂಧಿತರಿಂದ ಒಂದು ಬೈಕ್, ಶ್ರೀ ಗಂಧದ ತುಂಡುಗಳು,ಕತ್ತಿ,ಬ್ಯಾಗು ಮತ್ತು ಗರಗಸಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳಾದ ಅಭಿಲಾಷ್, ಮಿಥುನ್ ಕುಮಾರ್, ರಾಕೇಶ್, ಪ್ರತಾಪ್ ಭಾಗವಹಿಸಿದ್ದರು ಹಾಗೂ ಮೆಣಸಿನಹಾಡ್ಯ ಗ್ರಾಮಸ್ಥರ ಸಹಕಾರವಿತ್ತು.

ನಮ್ಮೂರಿನಲ್ಲಿ ಇಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರು ಸೇರಿ ಗಂಧ ಕಳ್ಳರನ್ನು ಹಿಡಿದಿದ್ದಾರೆ. ಕಳ್ಳರನ್ನು ಹಿಡಿದಿರುವುದು ಗ್ರಾಮಸ್ಥರಿಗೆ ಸಮಾಧಾನ ತಂದಿದೆ.ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
