ಕೊಪ್ಪ: ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕವಾಗಿ ಅಕ್ರಮ ಗೋ ಸಾಗಾಟ ಹೆಚ್ಚಾಗುತ್ತಿದ್ದು ಇಂದು ಕೊಪ್ಪ ಸಬ್ ಇನ್ಸ್ ಪೆಕ್ಟರ್ ಮಧು ಅವರ ನೇತೃತ್ವದಲ್ಲಿ ಗೋ ಕಳ್ಳತನಕ್ಕೆ ಬಳಸುತ್ತಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಯಿತು.

ಹೌದು .. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಾದ್ಯಂತ ಅಕ್ರಮ ಗೋ ಸಾಗಾಟ ಹೆಚ್ಚಾಗುತ್ತಿದ್ದು ಸ್ಥಳೀಯ ನಿವಾಸಿಗಳ ದೂರುಗಳ ಆಧಾರದ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರು. ಈ ವೇಳೆ ಮಾಹಿತಿ ಪ್ರಕಾರ ಇಂದು ಅಕ್ರಮ ಗೋ ಸಾಗಾಟ ತಡೆಯಲು ಮುಂದಾಗಿರುವ ಪೊಲೀಸರು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋ ಕಳ್ಳತನಕ್ಕೆ ಬಳಸುತ್ತಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಂಡರು.
ಕೊಪ್ಪ ಸಬ್ ಇನ್ಸ್ ಪೆಕ್ಟರ್ ಮಧು ಅವರ ನೇತೃತ್ವದಲ್ಲಿ ಕಾರನ್ನು ವಶಕ್ಕೆ ಪಡೆಯಲಾಗಿದ್ದು ಈ ವೇಳೆ ಎಎಸ್ಐ ಮಹೇಶ್ ಮತ್ತು ಯುವರಾಜ್ ಪ್ರಕಾಶ್ ಪ್ರಶಾಂತ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದರು
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಿವಮೊಗ್ಗ ಮೂಲದ ಆರೋಪಿಗಳಿಗಾಗಿ ಮುಂದುವರೆದ ಶೋಧ ಕಾರ್ಯ ನಡೆಯುತ್ತಿದೆ.
