Monday, February 9, 2026
Homeಕ್ರೈಮ್ಕೊಪ್ಪ: ತಹಶೀಲ್ದಾರ್ ಜೀಪ್‌ ಅಡ್ಡಗಟ್ಟಿ ಪ್ರಶ್ನಿಸಿದ ಮಂಜುನಾಥ್ ಕಾರ್ಬೈಲ್: ಕಾನೂನು ರೀತಿ ಕ್ರಮಕ್ಕೆ ಮನವಿ!

ಕೊಪ್ಪ: ತಹಶೀಲ್ದಾರ್ ಜೀಪ್‌ ಅಡ್ಡಗಟ್ಟಿ ಪ್ರಶ್ನಿಸಿದ ಮಂಜುನಾಥ್ ಕಾರ್ಬೈಲ್: ಕಾನೂನು ರೀತಿ ಕ್ರಮಕ್ಕೆ ಮನವಿ!

ಕೊಪ್ಪ: ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ಮಂಜುನಾಥ್ ಕಾರ್ಬೈಲ್ ಎಂಬುವರ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಪ್ಪ ತಾಲೂಕು ಇವರು ಮನವಿ ಮಾಡಿದ್ದಾರೆ

ಹೌದು… ಭಾನುವಾರ ದಂದು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಕೊಪ್ಪದ ತಹಶೀಲ್ದಾರ್ ಲಿಖಿತಾ ಮೋಹನ್ ಜೀಪ್‌ ಅನ್ನು ಸ್ಥಳೀಯ ಮಂಜುನಾಥ್ ಕಾರ್ಬೈಲ್ ಅವರು ತಡೆದು ಭಾನುವಾರ ಸರ್ಕಾರಿ ಜೀಪ್ ಏಕೆ ತಂದಿದ್ದೀರಿ, ಸರ್ಕಾರಿ ಕೆಲಸಕ್ಕೆ ನೀಡಿರುವ ವಾಹನವನ್ನು ನಿಮ್ಮ ಖಾಸಗಿ ಕೆಲಸಕ್ಕೆ ಏಕೆ ಉಪಯೋಗಿಸಿಕೊಳ್ಳುತ್ತಿದ್ದೀರಿ, ನಿಮಗೆ ನಿಯಮಗಳು ಅನ್ವಯಿಸುವುದಿಲ್ಲವಾ ಎಂದು ಪ್ರಶ್ನಿಸಿದ್ದು ಈ ಸಂಬಂಧ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಮಂಜುನಾಥ ಕಾರ್ಬೈಲ್ ಎಂಬುವರು ಕೊಪ್ಪ ತಹಶೀಲ್ದಾರ್ ಅವರ ವಾಹನವನ್ನು ಕೊಪ್ಪ ತೀರ್ಥಳ್ಳಿ ಮಾರ್ಗದ ಮಧ್ಯ ಕುಪ್ಪಳ್ಳಿ ಸಮೀಪ ಅಡ್ಡ ಗಟ್ಟಿ ವಾಹನ ಚಾಲಕನಿಗೆ ಏರು ಧ್ವನಿಯಲ್ಲಿ ಗದರಿಸಿ ಬೆದರಿಸಿ ತಹಶೀಲ್ದಾರ್ ರವರ ಕರ್ತವ್ಯಕ್ಕೆ ಅಡ್ಡಿಪಡಿಸಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತೇಜೋವಧೆ ಮಾಡಿ ಸರ್ಕಾರಿ ಅಧಿಕಾರಿ ಮತ್ತು ಸರ್ಕಾರಿ ನೌಕರರ ಆತ್ಮಸ್ಥೈರ್ಯ ಕುಗ್ಗಿಸುವಂತ ಕೆಲಸ ಮಾಡಿರುತ್ತಾರೆ

ಹೀಗಾಗಿ ಈ ವ್ಯಕ್ತಿಯು ಈ ಹಿಂದೆಯೂ ಸಹ ತಾಲೂಕು ಕಚೇರಿಯಲ್ಲಿ ಅಧಿಕಾರಿ ಮತ್ತು ನೌಕರರ ವಿರುದ್ಧ ಪದೇ ಪದೇ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಶಾಂತಿ ಕೆಲಸ ಮಾಡಿದಂತೆ ವಾತಾವರಣ ಸೃಷ್ಟಿಸುತ್ತಿರುವ ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ತಾಲೂಕಿನ ಸಮಸ್ತ ಸರ್ಕಾರಿ ನೌಕರರು ಶಾಂತಿಯ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಪ್ಪ ತಾಲೂಕು ಇವರು ಮನವಿ ಮಾಡಿದ್ದಾರೆ.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!