ಕೊಪ್ಪ: ನಾದಿನಿಯನ್ನು ಮದುವೆ ಮಾಡಲು ಒಪ್ಪದ ಸ್ವಂತ ಭಾವನಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಯನ್ನು ಜಯಪುರ ಪೊಲೀಸರು ಬಂಧಿಸಿದ್ದಾರೆ.
ಹೌದ .. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ತೆಂಗಿನಮನೆ ಗ್ರಾಮದಲ್ಲಿ ಘಟನೆ ನಡೆದಿದ್ದು. ರಾಜೇಶ್(27) ಚಾಕು ಇರಿತದಿಂದ ಕೊಲೆಯಾದ ವ್ಯಕ್ತಿಯಾಗಿದ್ದನು.
ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಗ್ರಾಮದ ವರುಣ್ ಬಾಳೆಹೊನ್ನೂರು ಸಮೀಪದ ಬಸಾಪುರ ನಿವಾಸಿಯಾದ ರಾಜೇಶ್ ಅವರ ಹೆಂಡತಿಯ ತಂಗಿಯನ್ನ ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಇಂದು ತೆಂಗಿನಮನೆ ಗ್ರಾಮದ ಸುರೇಶ್ ಎನ್ನುವವರ ಮಾವನ ಮನೆಗೆ ಬಂದಿದ್ದ. ವರುಣ್ ಮನೆಗೆ ಬಂದಿರುವ ವಿಷಯವನ್ನು ಸುರೇಶ್ ಅಳಿಯ ರಾಜೇಶ್ ಗೆ ತಿಳಿಸಿದ್ದ. ಈ ವೇಳೆ ವರುಣ್ ನಾದಿನಿಯೊಂದಿಗೆ ಮದುವೆ ಮಾಡುವಂತೆ ಪಟ್ಟು ಹಿಡಿದಿದ್ದ. ಇದಕ್ಕೆ ಒಪ್ಪದ ರಾಜೇಶ್ ನನ್ನು ವರುಣ್ ಚಾಕು ಇರಿದು ಕೊಲೆ ಮಾಡಿದ್ದನು.
