ಕೊಪ್ಪ: ನವರಾತ್ರಿಗೆ ದೇಶದ ಜನತೆಗೆ ಎರಡು ಮಾದರಿಯ ಜಿಎಸ್ ಟಿ ಮೂಲಕ ನರೇಂದ್ರ ಮೋದಿ ಹಾಗೂ ನಿರ್ಮಲ ಸೀತರಾಮನ್ ಅವರು ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು .
ಅವಕಾಶವಾದಗೆಲ್ಲ ದೇಶ ಜನತೆಗೆ ಅನುಕೂಲಕರ ಅಂಶಗಳನ್ನು ಒದಗಿಸುವ ಮೋದಿಯವರ ಚಿಂತನೆಯು ದೇಶದ ಮತ್ತು ದೇಶವಾಸಿಗಳ ಅಭಿವೃದ್ಧಿಯನ್ನು ಪ್ರಗತಿಯತ್ತ ಕೊಂಡೊಯ್ಯತ್ತಿದೆ. ಎರಡು ಮಾದರಿ ಜಿ ಎಸ್ ಟಿ ಇಂದಾಗಿ ದಿನನಿತ್ಯದ ವಸ್ತುಗಳಾದ ತುಪ್ಪ, ಪನೀರ್, ಬೆಣ್ಣೆ, ನಮ್ಕೀನ್, ಜಾಮ್, ಕೆಚಪ್, ಡ್ರೈ ಫ್ರೂಟ್ಸ್, ಕಾಫಿ ಜೊತೆಗೆ ಐಸ್ ಕ್ರೀಮ್ ನಂತಹ ವಸ್ತುಗಳು ಕಡಿಮೆ ತೆರಿಗೆಗೆ ಒಳಪಡಲಿವೆ. ಈ ಮೊದಲು ಇವುಗಳ ಮೇಲೆ 12% ರಿಂದ 18% ಜಿಎಸ್ಟಿ ಇತ್ತು, ಈಗ ಅದನ್ನು 5% ಪಟ್ಟಿಗೆ ಸೇರಿಸಲಾಗಿದೆ .
ಆರೋಗ್ಯ ಕ್ಷೇತ್ರದಲ್ಲೂ ಜಿಎಸ್ಟಿ ಕಡಿತವಾಗಲಿದ್ದು, ಹೆಲ್ತ್ ಇನ್ಶ್ಯುರೆನ್ಸ್ ಹಾಗೂ 33 ಜೀವರಕ್ಷಕ ಮೆಡಿಸಿನ್ ಗಳ ದರವೂ ಕಡಿಮೆ ಆಗಲಿದೆ. ಇದರಿಂದಾಗಿ ಜನಸಾಮಾನ್ಯರು ಕೂಡ ಹೆಲ್ತ್ ಇನ್ಶುರೆನ್ಸ್ ಗಳನ್ನು ಹೊಂದಲು ಸಹಾಯವಾಗುತ್ತದೆ. ಜೊತೆಗೆ ಗ್ಲುಕೋಮೀಟರ್‌ಗಳು, ರೋಗನಿರ್ಣಯ ಕಿಟ್‌ಗಳು ಮತ್ತು ಹೆಚ್ಚಿನ ಔಷಧಿಗಳ ಮೇಲೆ ಕೇವಲ 5% ಜಿಎಸ್‌ಟಿ ವಿಧಿಸಲಾಗುವುದು. ಈ ಹಿಂದೆ ಈ ವಸ್ತುಗಳು 12% ಅಥವಾ 18% ಸ್ಲ್ಯಾಬ್‌ನಲ್ಲಿದ್ದವು ಇದು ದೇಶದ ಜನತೆಗೆ ಆರೋಗ್ಯ ಚೇತರಿಗೆ ಹೆಚ್ಚು ಸಹಾಯವಾಗಲಿದೆ .
ಒಟ್ಟಾರೆ ಜನತೆಯು ಅಗತ್ಯ ವಸ್ತುಗಳ ಖರೀದಿ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರದ ಪ್ರಯತ್ನಕ್ಕೆ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ವಿಶೇಷ ಧನ್ಯವಾದಗಳು ಎಂದರು.
ವರದಿ: ಶಶಿ ಬೆತ್ತದಕೊಳಲು
