Saturday, August 8, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಿಜೆಪಿ ಕಸಬಾ ಹೋಬಳಿ ಘಟಕದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ!

ಮೂಡಿಗೆರೆ: ಬಿಜೆಪಿ ಕಸಬಾ ಹೋಬಳಿ ಘಟಕದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ!

Telegram Group
Join Now

ಮೂಡಿಗೆರೆ: ಪಟ್ಟಣದ ಕೆಲ್ಲೂರು ಗ್ರಾಮದ ಉಡುಬಿಯಮ್ಮ ದೇವಾಲಯದ ಸುತ್ತಮುತ್ತ ರಾಷ್ಟ್ರದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜನ್ಮ ದಿನಾಚರಣೆಯ ಸಲುವಾಗಿ ಬಿಜೆಪಿ ಕಸಬಾ ಮಂಡಲ ಪದಾಧಿಕಾರಿಗಳು ಸೇವಾ ಪಾಕ್ಷಿಕ ಕಾರ್ಯದ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಭಾರತೀಯ ಜನತಾ ಪಾರ್ಟಿ ಕಸಬಾ ಹೋಬಳಿ ಕಾರ್ಯಕರ್ತರು 150 ಸಸಿ ನೆಡುವ ಮೂಲಕ ಮೋದಿ ಅವರ ಜನ್ಮ ದಿನ ಆಚರಿಸಿದರು.

ಬಿಜೆಪಿ ಕಸಬಾ ಘಟಕದ ಅಧ್ಯಕ್ಷ ಸಂದೀಪ್ ಕೆಲ್ಲೂರು ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಪ್ರಾಣಿ ಪಕ್ಷಿ ಒಳಗೊಂಡು ಜೀವ ಸಂಕುಲ ಉಳಿಸಲು ನಾವೆಲ್ಲರೂ ಅವಶ್ಯವಿರುವ ಕಡೆಗೆ ಸಸಿಗಳನ್ನು ನೆಟ್ಟು ಪೋಷಿಸಿದರೆ ಮಾತ್ರ ಪ್ರಾಕೃತ್ತಿಕ ಸಂಪತ್ತು ಹೆಚ್ಚಾಗುತ್ತದೆ ಎಂದರು.

ದಿಶಾ ಸಮಿತಿ ಅಧ್ಯಕ್ಷ ಮನೋಜ್ ಹಳೆಕೋಟೆ ಮಾತನಾಡಿ, ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಆರೋಗ್ಯ ದಿಂದ ಇರಲು ಸಾಧ್ಯ. ಯುವ ಪೀಳಿಗೆ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಮುಂದಾಗಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ರಾಜ್ಯ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ತಾಲೂಕು ಮುಖಂಡರಾದ ಜೈಪಾಲ್ ಬಿದರಹಳ್ಳಿ, ಪಂಚಾಕ್ಷರಿ ಹಾಲೂರು, ಪ್ರಮೋದ್ ದುಂಡುಗ, ಸುಜಿತ್ ಹಳೇಮೂಡಿಗೆರೆ, ಶಿವಾನಂದ್ ಕುನ್ನಳ್ಳಿ, ಭಾರತಿ ರವೀಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments