Tuesday, February 10, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ: ಸೀತಾರಾಮ ದೇವಸ್ಥಾನಕ್ಕೆ ಮಾಜಿ ಸಚಿವ ಬೈರತಿ ಬಸವರಾಜ್ ಭೇಟಿ!

ಕೊಟ್ಟಿಗೆಹಾರ: ಸೀತಾರಾಮ ದೇವಸ್ಥಾನಕ್ಕೆ ಮಾಜಿ ಸಚಿವ ಬೈರತಿ ಬಸವರಾಜ್ ಭೇಟಿ!

ಕೊಟ್ಟಿಗೆಹಾರ: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್ ವಿರುದ್ಧ ಬಂಧನದ ಭೀತಿ ವ್ಯಕ್ತವಾಗುತ್ತಿರುವ ಹಿನ್ನೆಲೆ ಅವರು ಇಂದು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಸವರಾಜ್ ನಂತರ, ಅಲ್ಲಿಂದ ಕೊಟ್ಟಿಗೆಹಾರದ ಸೀತಾರಾಮ ದೇವಾಲಯಕ್ಕೆ ಭೇಟಿ ನೀಡಿದರು.

ರಾಜಕೀಯ ಒತ್ತಡ ಮತ್ತು ಕಾನೂನು ಪ್ರಕ್ರಿಯೆಗಳು ಸಾಗುತ್ತಿರುವ ನಡುವೆಯೇ ದೇವರ ದರ್ಶನದಲ್ಲಿ ನಿರತರಾದ ಬಸವರಾಜ್ ಅವರ ಈ ಪ್ರಯಾಣವು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಕೊಟ್ಟಿಗೆಹಾರ ಶ್ರೀರಾಮ ದೇವಸ್ಥಾನಕ್ಕೆ ಭೇಟಿ ನೀಡಿ ಶರನ್ನವರಾತ್ರಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು ಬಳಿಕ ಅವರನ್ನು ದೇವಸ್ಥಾನದ ಸಮಿತಿಯ ಸದಸ್ಯರು ಮುಖಂಡರು ಶಾಸಕರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಕಿರಣ್, ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ನರೇಂದ್ರಗೌಡ, ಎ.ಎಸ್.ಅಶ್ವಥ್, ಎ.ಆರ್.ಅಭಿಲಾಷ್, ಜಿ.ವೇಣುಗೋಪಾಲ್ ಪೈ, ಸಂಜಯ್ ಗೌಡ, ಟಿ.ಎಂ.ಆದರ್ಶ್, ವಿಕ್ರಂಗೌಡ, ಸಂದೀಪ್ ಗೌಡ, ಗಿರೀಶ್, ಬಿ.ಎಸ್.ಕಲ್ಲೇಶ್ ವಿನಯ್ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!