ಮೂಡಿಗೆರೆ: ಚಿಕ್ಕಮಗಳೂರು ಮಲೆನಾಡಿನ ಜೀವನಶೈಲಿಯನ್ನು ತನ್ನ ಕಾವ್ಯ ಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ತಲುಪಿಸಿದ ಲೇಖಕ ಕವಿ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ದಿನಾಚರಣೆ ಅಂಗವಾಗಿ ತೇಜಸ್ವಿ @ 88 ಎಂಬ ವಿಶೇಷ ಕಾರ್ಯಕ್ರಮಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿರುವ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ
ನಾಳೆ ಸೆಪ್ಟೆಂಬರ್ 8 ರಂದು ಆರಂಭಗೊಂಡು ಈ ಎರಡು ದಿನಗಳ ಶಿಬಿರದಲ್ಲಿ ವ್ಯಂಗ್ಯ ಚಿತ್ರ ಹಕ್ಕಿ ಕೀಟ ಚಿತ್ರಕಲೆ ಹಾಗೂ ಕನ್ನಡ ಹಸ್ತಾಕ್ಷರಗಳ ಕಾರ್ಯಗಾರ ನಡೆಯಲಿದೆ ಆಸಕ್ತ ಹಾಗೂ ಹವ್ಯಾಸಿ ಕಲಾವಿದರಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಪ್ರತಿ ವರ್ಷ ತೇಜಸ್ವಿ ಪ್ರತಿಷ್ಠಾನ ತೇಜಸ್ವಿಯವರ ಸ್ಮರಣಾರ್ಥ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಬಾರಿ ಕೂಡ ಕಲಾತ್ಮಕ ಶಿಬಿರಗಳ ಮೂಲಕ ಅಭಿಮಾನಗಳನ್ನು ಮನೆ ಸೆಳೆಯುತ್ತಿದೆ.
ತೇಜಸ್ವಿ ಅವರ ಸಾಹಿತ್ಯ ಕೀರ್ತಿ ಹಾಗೂ ಮಲೆನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ
