ಮೂಡಿಗೆರೆ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳದ ಭಕ್ತರಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರು ಒತ್ತಾಯಿಸಿದ್ದಾರೆ..
ಹೌದು .. ಧರ್ಮಸ್ಥಳ, ಸುಬ್ರಮಣ್ಯ, ಹೊರನಾಡು, ಕಳಸಗಳಂತ ಪುಣ್ಯ ಕ್ಷೇತ್ರಗಳಿಗೆ ಹೃದಯ ಭಾಗವೆ ಈ ಕೊಟ್ಟಿಗೆಹಾರ. ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕಾರಣಕ್ಕೆ ಸಂಬಂಧಿಸಿದಂತೆ SIT ತನಿಖೆ ನಡೆಸುತ್ತಿದ್ದೂ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂಬುದೇ ಇಡಿ ದೇಶದ ಜನತೆಯ ಆಶಯ.
ಹಾಗೆ ಚಿಕ್ಕಮಗಳೂರಿನಲ್ಲಿ 2000 ಸಾವಿರಕ್ಕೂ ಹೆಚ್ಚು ಭಕ್ತರು ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಪ್ರತಿಭಟನೆ ನಡೆಸಿದರು. ಸುಮಾರು 2 ಕಿ.ಮೀ. ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು. ಸುಳ್ಳಿನ ಮೃತದೇಹದ ಹಿಂದೆ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಹುನ್ನಾರವಿದೆ. ಕುತಂತ್ರಿಗಳ ಷಡ್ಯಂತ್ರಕ್ಕೆ ಸರ್ಕಾರದ ಬೆಂಬಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ಪುಣ್ಯ ಕ್ಷೇತ್ರಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಕೊಟ್ಟಿಗೆಹಾರ ಜಂಕ್ಷನ್ ಸದಾ ಬ್ಯುಸಿ ಯಾಗುತ್ತಿತ್ತು. ಧರ್ಮಸ್ಥಳ ಪ್ರಕರಣ ಬೆನ್ನಲ್ಲೇ ಪ್ರವಾಸಿಗರು ಹಾಗೂ ಭಕ್ತಾದಿಗಳು ಬರುವುದು ಅತಿ ಕಡಿಮೆ ಯಾಗಿದ್ದು… ಕೊಟ್ಟಿಗೆಹಾರ ಸುತ್ತ ಮುತ್ತಲಿನ ಹಳ್ಳಿ ಜನರು ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದರು.
ಆದರೆ ಪ್ರವಾಸಿಗರು ಹಾಗೂ ಭಕ್ತ ಗಣ ಬಾರದೆ ಇರುವುದರಿಂದ ಕೊಟ್ಟಿಗೆಹಾರ ಖಾಲಿ ಹೊಡೆಯುತ್ತಿದ್ದೂ ವ್ಯಾಪಾರ ವಿಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಸ್ಥಳೀಯ ಸಂಜಯ್ ಮಾತನಾಡಿ ಧರ್ಮಸ್ಥಳ ಪ್ರಕಾರಣಕ್ಕೆ ಸಂಬಂಧಿಸಿದಂತೆ ತಪ್ಪು ಎಸೆಗಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.. ದೇವಸ್ಥಾನಕ್ಕು ಪ್ರಕಾರಣಕ್ಕೂ ಹೋಲಿಕೆ ಸರಿಯಲ್ಲ. ಭಕ್ತಾದಿಗಳು ಪ್ರವಾಸಿಗರು ಭಯ ಪಡದೆ ಧರ್ಮಸ್ಥಳ ಬಂದು ದೇವರ ಕೃಪೆಗೆ ಪಾತ್ರರಾಗಬೇಕು ಎಂದರು
ವ್ಯಾಪಾರವನ್ನೇ ಅವಲಂಬಿತವಾಗಿ ಜೀವನ ನಡೆಸುತ್ತಿರುವ ಕುಟುಂಬಗಳಿವೆ.. ಪುಣ್ಯ ಸ್ಥಳಗಳಲ್ಲಿ ಇಂತಹ ಪ್ರಕರಣಗಳನ್ನು ನಡೆಯಬಾರದಿತ್ತು. ಆದರೂ ನಡೆದುಹೋಗಿದೆ ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸಿ ಆದಷ್ಟು ಬೇಗ ಪ್ರಕರಣಕ್ಕೆ ಇತ್ಯಾರ್ಥಹೇಳಬೇಕು ಎಂದರು
ಕೊಟ್ಟಿಗೆಹಾರ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಇಲ್ಲಿನ ಜನರು ಜೀವನ ನಡೆಸಲು ಇತ್ತೀಚಿನ ದಿನಗಳಲ್ಲಿ ಪರದಾಡುತ್ತಿದ್ದರೆ ಎಂದರು
ಈ ವೇಳೆ ಹೋಟೆಲ್ ಮಾಲೀಕರಾದ ಗಜೇಂದ್ರ ತರುವೆ, ದಿನಸಿ ಅಂಗಡಿ ಮಾಲೀಕ ವಿಕ್ರಮ್ ಬಿದಿರುತಳ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
