Tuesday, August 11, 2026
Homeಇತರೆಹಾಸನ: ಎಂಥಾ ದುರ್ದೈವ... ಮಲಗಿದ್ದಾಗಲೇ ಪ್ರಾಣ ಬಿಟ್ಟ ಪಿಯು ವಿದ್ಯಾರ್ಥಿನಿ, ಅನಾರೋಗ್ಯದಿಂದ ಯುವಕ ಸಾವು!

ಹಾಸನ: ಎಂಥಾ ದುರ್ದೈವ… ಮಲಗಿದ್ದಾಗಲೇ ಪ್ರಾಣ ಬಿಟ್ಟ ಪಿಯು ವಿದ್ಯಾರ್ಥಿನಿ, ಅನಾರೋಗ್ಯದಿಂದ ಯುವಕ ಸಾವು!

Telegram Group
Join Now

ಹಾಸನ: ಮಲಗಿದ್ದಾಗಲೇ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಸರಗೂರು ಗ್ರಾಮದಲ್ಲಿ ನಡೆದಿದೆ.

ನಾಗರಾಜು ಹಾಗೂ ಭಾಗ್ಯಮ್ಮ ಅವರ ಪುತ್ರಿ ಹರ್ಷಿತಾ (17) ಮೃತ ದುರ್ದೈವಿ. ರಾಮನಾಥಪುರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಹರ್ಷಿತಾ ಕಾಲೇಜು ಮುಗಿಸಿ ಸಂಜೆ 4 ಗಂಟೆಗೆ ಮನೆಗೆ ಬಂದಿದ್ದರು. ಎಂದಿನಂತೆ ಮನೆಯಲ್ಲಿ ಮಲಗಿದ್ದ ಹರ್ಷಿತಾಳನ್ನು ಸಂಜೆ 6 ಗಂಟೆಗೆ ತಾಯಿ ಎಬ್ಬಿಸಲು ಹೋದಾಗ ಮೃಪಟ್ಟಿರುವುದು ಗೊತ್ತಾಗಿದೆ. ತಕ್ಷಣವೇ ಕೊಣನೂರು ಆಸ್ಪತ್ರೆಗೆ ಕರೆತರಲಾಯಿತಾದರೂ ಮೃಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಹಾಗೆ ಕೊಣನೂರು ಹೋಬಳಿ ವಡವಾಣ ಹೊಸಹಳ್ಳಿ ಗ್ರಾಮದ ನಿವಾಸಿ ಸುಭಾಷ್ (20) ಅನಾರೋಗ್ಯದಿಂದ ನಿಧನರಾದರು. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಭಾಷ್‌ಗೆ ತಂದೆ, ತಾಯಿ, ಸಹೋದರ ಇದ್ದಾರೆ. ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ ಸ್ವಗ್ರಾಮ ವಡವಾಣಹೊಸಹಳ್ಳಿಯಲ್ಲಿ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments