Saturday, August 22, 2026
HomeಇತರೆLokayukta Raid: 2 ಲಕ್ಷ ರೂ. ಲಂಚ ಪಡೆಯುವಾಗ ಇಬ್ಬರು ಸರ್ವೇ ಅಧಿಕಾರಿಗಳು ಲೋಕಾ ಬಲೆಗೆ!

Lokayukta Raid: 2 ಲಕ್ಷ ರೂ. ಲಂಚ ಪಡೆಯುವಾಗ ಇಬ್ಬರು ಸರ್ವೇ ಅಧಿಕಾರಿಗಳು ಲೋಕಾ ಬಲೆಗೆ!

Telegram Group
Join Now

ಚಿಕ್ಕಮಗಳೂರು: 2 ಲಕ್ಷ ರೂ. ಲಂಚ ಪಡೆಯುವಾಗ ಇಬ್ಬರು ಸರ್ವೇ ಅಧಿಕಾರಿಗಳು ಲೋಕಾಯುಕ್ತ  ಬಲೆಗೆ ಬಿದ್ದಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಸರ್ವೇಯರ್ ದೊರೆರಾಜ್, ರಂಗನಾಥ್ ಸಿಕ್ಕಿಬಿದ್ದ ಅಧಿಕಾರಿಗಳು. ಕೃಷಿ ಜಮೀನಿನ ಸರ್ವೇ ಮಾಡಿ‌ ಸ್ಕೆಚ್ ತಯಾರಿಸಲು 10 ಲಕ್ಷ‌ಕ್ಕೆ ಬೇಡಿಕೆ ಇಟ್ಟಿದ್ದರು. ತಮ್ಮ‌ ಖಾಸಗಿ ‌ಕಚೇರಿಯಲ್ಲಿ‌ ಎರಡು ಲಕ್ಷ ಪಡೆಯುವಾಗ ಲೋಕಾ ಬಲೆಗೆ ಸಿಲುಕಿದ್ದಾರೆ.

ಇಂದಾವರ ಗ್ರಾಮದ ಧರಣೇಶ್‌ ಎಂಬವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಧರಣೇಶ್ ‌ಅವರ ಕೃಷಿ ಜಮೀನು ಸರ್ವೆಗಾಗಿ 10 ಲಕ್ಷಕ್ಕೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಮುಂಗಡ ಎರಡು ಲಕ್ಷ ಹಣ ಪಡೆಯುವಾಗ ಟ್ರ್ಯಾಪ್‌ ಆಗಿದ್ದಾರೆ.

ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಡಿವೈಎಸ್‌ಪಿ ತಿರುಮಲೇಶ್‌ ನೇತೃತ್ವದಲ್ಲಿ ದಾಳಿ ನಡೆದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments