Tuesday, October 6, 2026
Homeಜಿಲ್ಲಾಸುದ್ದಿHeavy Goods Vehicles: ಭಾರೀ ಸರಕು ವಾಹನಗಳ ಸಂಚಾರ, ಹದಗೆಟ್ಟ ರಸ್ತೆ: ಸೂಕ್ತ ಕ್ರಮ ಕೈಗೊಳ್ಳುವಂತೆ...

Heavy Goods Vehicles: ಭಾರೀ ಸರಕು ವಾಹನಗಳ ಸಂಚಾರ, ಹದಗೆಟ್ಟ ರಸ್ತೆ: ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹ

Telegram Group
Join Now

ಮೂಡಿಗೆರೆ: ಭಾರೀ ಗಾತ್ರದ ಸರಕು ವಾಹನ ಗ್ರಾಮೀಣ ರಸ್ತೆಯಲ್ಲಿ ತೀರಾಗಡುತ್ತಿರುವುದರಿಂದ ರಸ್ತೆ ಹಾಳಾಗಿದ್ದು ಕೂಡಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿದರಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಬಿದರಹಳ್ಳಿ ಬೃಹದಾಖರದ ವಾಹನಗಳು ನಮ್ಮ ಊರಿನ ರಸ್ತೆಯಲ್ಲಿ ಹಲವು ದಿನಗಳಿಂದ ಓಡಾಡುತ್ತಿದ್ದೂ ವಾಹನ ಓಡಾಟ ತಡೆಯಬೇಕು ಎಂದು ಒತ್ತಾಯಿಸಿದರು

ಇಂದು ಗ್ರಾಮದ ರಸ್ತೆಯಲ್ಲಿ ಸುಮಾರು 40 ಟನ್ ಕಬ್ಬಿಣ ತುಂಬಿದ ಲಾರಿಯೊಂದು ರಸ್ತೆಯಲ್ಲಿ ಕೆಟ್ಟು ನಿಂತು ಸ್ಥಳೀಯರ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಲ್ಲದೆ ಹತ್ತು ಚಕ್ರದ ವಾಹನ ಸಂಚಾರದಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಕಸಬಾ ಹೋಬಳಿ ಸರ್ವೇ ನಂಬರ್ 118 ರಲ್ಲಿ ನೂತನ ಮೊರಾರ್ಜಿ ದೇಸಾಯಿ ಶಾಲೆಯ ಕಾಮಗಾರಿ ನಡೆಯುತ್ತಿದ್ದೂ ಸಂಬಂಧ ಪಟ್ಟ ಇಂಜಿನಿಯರ್, ಗುತ್ತಿಗೆದಾರರು ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ

ಬಿದರಹಳ್ಳಿ -ಕೆಂಜಿಗೆ ಮಾರ್ಗ ಕಲ್ಪಿಸುವ ರಸ್ತೆ ಇದಾಗಿದ್ದು ಬೃಹತ್ ವಾಹನ ಸಂಚಾರ ದಿಂದಾಗಿ ಹಲವಾರು ಮೋರಿ, ತಂತಿ ಕಂಬಗಳು ಜಖಂಗೊಂಡಿವೆ. ಸ್ಥಳೀಯ ವಾಹನ ಸವಾರರು ದೊಡ್ಡ ವಾಹನಗಳಿಗೆ ಸೈಡ್ ಕೊಡಲು ಸಾಧ್ಯವಾಗದೆ ತೀವ್ರ ಪರದಾಟ ನಡೆಸುತ್ತಿದ್ದಾರೆ ಎಂದರು

ಕಾಮಗಾರಿಗೆ ಬೇಕಾದ ವಸ್ತುಗಳನ್ನ ಹೆದ್ದಾರಿ ಸಮೀಪ ಖಾಲಿ ಜಾಗಗಳಲ್ಲಿ ಶೇಖಸಿಕೊಳ್ಳುವುದು ಸೂಕ್ತ, ಅವಶ್ಯಕತೆ ಇದ್ದಾಗ ಸಣ್ಣ ಗಾತ್ರದ ವಾಹನಗಳಲ್ಲಿ ಕೊಂಡೋಯ್ಯಬೇಕು ಎಂದರು

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಜಯರಾಮ್ ಗೌಡ, ರಾಜೀವ್,ಜಯಪಾಲ್, ಜಯಂತ್, ಮದನ್, ತೇಜಸ್, ಸೇರಿದಂತೆ ಆನೇಕರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!