ಚಿಕ್ಕಮಗಳೂರು : ಲೇಖಕ ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಕೃತಿಯಲ್ಲಿನ ವಿವಾದಾತ್ಮಕ ಬರಹಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠವು ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠ, 12ನೇ ಶತಮಾನದ ಬಸವಣ್ಣನವರ ಬಗ್ಗೆ ಹಗುರವಾದ ಮಾತುಗಳನ್ನಾಡಿದ್ದು ಆಕ್ಷೇಪಾರ್ಹ ಎಂದಿದೆ ಹಾಗೆ ಯಾವುದೇ ವ್ಯಕ್ತಿಗಳು ಯಾವುದೇ ಮಹಾತ್ಮರ ಬಗ್ಗೆ ಇಂತಹ ಅಸಹನೀಯವಾದ ಮಾತುಗಳನ್ನಾಡುವುದು ಬರೆಯುವುದು ಸರಿಯಲ್ಲ, ಇಂತಹ ಘಟನೆಗಳು ಮರುಕಳಿಸಬಾರದು ಎಂದು ತಿಳಿಸಿದೆ.
ಇತಿಹಾಸವನ್ನ ಮೀರಿಯೂ ಬಹು ಸಂಖ್ಯಾತ ಜನ ತಮ್ಮ ಆರಾಧ್ಯರ ಬಗ್ಗೆ ಭಕ್ತಿ ಭಾವಗಳನ್ನ ಇರಿಸಿಕೊಂಡಿರುತ್ತಾರೆ. ಅಂತಹ ಸಂದರ್ಭದಲ್ಲಿ ಜನರ ಭಾವನೆಗೆ ನೋವಾಗುವ ಕೆರಳಿಸುವ ಕೆಲಸ ಯಾರು ಮಾಡಬಾರದು. ಸಂಪ್ರದಾಯ ಪರಂಪರೆಯ ಮಹಾತ್ಮರನ್ನ ಅವಹೇಳನ ಮಾಡುವುದು ಖಂಡನೀಯ ಹಾಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಎಲ್ಲರು ಉತ್ತಮ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
