Tuesday, October 6, 2026
Homeಜಿಲ್ಲಾಸುದ್ದಿಪ್ರಧಾನಿ ಮೋದಿ ಜನ್ಮದಿನ ಪ್ರಯುಕ್ತ ಬುಧವಾರ ಬಿಜೆಪಿ ಸೇವಾ ಜ್ಯೋತಿ ಕಾರ್ಯಕ್ರಮ ಆಯೋಜನೆ

ಪ್ರಧಾನಿ ಮೋದಿ ಜನ್ಮದಿನ ಪ್ರಯುಕ್ತ ಬುಧವಾರ ಬಿಜೆಪಿ ಸೇವಾ ಜ್ಯೋತಿ ಕಾರ್ಯಕ್ರಮ ಆಯೋಜನೆ

Telegram Group
Join Now

ಮೂಡಿಗೆರೆ:  ಪ್ರಧಾನ ಮಂತ್ರಿ ಮಾನ್ಯ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಜ್ಯೋತಿ ಕಾರ್ಯಕ್ರಮವು ಚಿಕ್ಕಮಗಳೂರಿನಲ್ಲಿ ಅ 7 ಬುಧವಾರ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರೇಂದ್ರ ತಿಳಿಸಿದರು. ಅವರು ಇಲ್ಲಿನ ಪಂಚವಟಿ ಬಿಜೆಪಿ ಕಚೇರಿಯಲ್ಲಿ ಪ್ರಮುಖ ಪದಾಧಿಕಾರಿಗಳೊಂದಿಗೆ ಮಾತನಾಡಿ. ಬೆಳಗ್ಗೆ 8:30ಕ್ಕೆ ಮೂಡಿಗೆರೆ ವೇಣುಗೋಪಾಲ್ ಸ್ವಾಮಿ ದೇವಸ್ಥಾನದಿಂದ ಮೂಡಿಗೆರೆಯ ಬಿಜೆಪಿ ಕಾರ್ಯಕರ್ತರು. ನರೇಂದ್ರ ಮೋದಿ ಜಿ ಅಭಿಮಾನಿಗಳು. ಪ್ರಮುಖ ಪದಾಧಿಕಾರಿಗಳು ಒಟ್ಟಾಗಿ ಚಿಕ್ಕಮಗಳೂರಿಗೆ ತೆರಳಲ್ಲಿದ್ದು. ಈ ಕಾರ್ಯಕ್ರಮಕ್ಕೆ 10 ನಿಮಿಷ ಮುಂಚಿತವಾಗಿ ಪದಾಧಿಕಾರಿಗಳು ಆಗಮಿಸಲು ಕೋರಿಕೊಳ್ಳಲಾಗಿದ್ದು. ಸಭೆಯು ಯಶಸ್ವಿಯಾಗಿ ನಡೆಯಲು ಸಹಕರಿಸಬೇಕು ಎಂದು ತಿಳಿಸಿದರು..

ಒಂದು ತಿಂಗಳ ಕಾಲ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ 14 ಪ್ರಮುಖ ಕಾರ್ಯಕ್ರಮಗಳಲ್ಲಿ ಸೇವಾ ಜ್ಯೋತಿ ಕಾರ್ಯಕ್ರಮವು ಪ್ರಮುಖವಾಗಿದ್ದು. ಬುಧವಾರ ಚಿಕ್ಕಮಗಳೂರಿನ ಅಮೃತೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಲಿದ್ದು. ಈ ಕಾರ್ಯಕ್ರಮಕ್ಕೆ ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರು ಪದಾಧಿಕಾರಿಗಳು ಪ್ರಮುಖ ಮುಖಂಡರು ಭಾಗವಹಿಸಲಿದ್ದು. ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಪ್ರಾರಂಭವಾಗಿ 11 ಗಂಟೆಗೆ ಮುಕ್ತಾಯಗೊಳಲಿದ್ದು. ಮೂಡಿಗೆರೆಯಿಂದ ಸರಿಯಾಗಿ 8:30 ಕ್ಕೆ ತೆರಳುವ ಸಂಕಲ್ಪ ಮಾಡಲಾಗಿದೆ ಎಂದು ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ತಿಳಿಸಿದ್ದಾರೆ..

ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ರಘು ಜನ್ನಾಪುರ. ಪ್ರಕೋಷ್ಠಗಳ ಸಂಚಾಲಕ ಪಂಚಾಕ್ಷರಿ ಹಾಲೂರು. ಪ್ರಶಾಂತ್ ಬಿಳಗುಳ. ನಯನ ತಳವಾರ. ಲೋಕೇಶ್ ಮರ್ಕಲ್. ಭರತ್. ಚಂದ್ರಣ್ಣ. ಸುಜಿತ್. ಸಚಿನ್. ರಂಗನಾಥ್. ಸಂದೀಪ್. ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!